
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.24: ನಗರದ ಡಾ. ರಾಜ್ಕುಮಾರ್ ಉದ್ಯಾನವನದಲ್ಲಿ ಇಂದು ಕನ್ನಡದ ಮೇರು ನಟ ಡಾ. ರಾಜಕುಮಾರ ಅವರ ಜನ್ಮದಿನವನ್ನು ರಾಜ್ ಪ್ರತಿಮೆಗೆ ಹೂ ಮಾಲೆ ಅರ್ಪಿಸುವ ಮೂಲಕ ನಗರದ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಮತ್ತವರ ಬೆಂಬಲಿಗರು ಆಚರಿಸಿದರು.
ಈ ವೇಳೆ ಮಾತನಾಡಿದ ಸೋಮಶೇಖರ ರೆಡ್ಡಿ ಅವರು, “ಡಾ. ರಾಜ್ಕುಮಾರ್ ಅವರು ಕೇವಲ ನಟರಲ್ಲ, ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ. ಅವರ ಬದುಕು, ಮೌಲ್ಯಗಳು, ಸರಳತೆ, ಕನ್ನಡದ ಮೇಲಿನ ಅಭಿಮಾನ ಇಂದಿನ ಪೀಳಿಗೆಗೆ ಮಾದರಿ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಜನಮನದಲ್ಲಿ ಬಿತ್ತಿದ ಮಹಾನ್ ವ್ಯಕ್ತಿತ್ವ ರಾಜ್ ಅವರುದು ಎಂದರು.
ಇಂದಿನ ಯುವಜನತೆ ಡಾ. ರಾಜ್ಕುಮಾರ್ ಅವರ ವ್ಯಕ್ತಿತ್ವದಿಂದ ಪ್ರೇರಣೆ ಪಡೆಯಬೇಕು. ಅವರ ಸರಳ ಜೀವನಶೈಲಿ ಮತ್ತು ಕನ್ನಡಾಭಿಮಾನ ಎಲ್ಲರಿಗೂ ಮಾದರಿಯಾಗಬೇಕೆಂದರು.






















