
ಮಂಗಳೂರು, ಮೇ ೧೯: ಆನ್ಲೈನ್ ಮೂಲಕ ಔಷಧಗಳ ಮಾರಾಟವನ್ನು ವಿರೋಧಿಸಿ ಇಂದು(ಮೇ ೨೦) ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಔಷಧಿಗಳ ಪೂರೈಕೆಗೆ ಕೆಲವು ಮೆಡಿಕಲ್ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
ಅಪೋಲೋ ಫಾರ್ಮಸಿ ೩೮ ಸಂಸ್ಥೆಗಳು, ಮೆಡ್ ಪ್ಲಸ್ ೪೮ ಸಂಸ್ಥೆಗಳು, ಪ್ರಧಾನಮಂತ್ರಿ ಜನೌಷಧಿ ಕೇಂದ್ರ ೧೩೦ ಮೆಡಿಕಲ್ ಅಂಗಡಿಗಳು ಮತ್ತು ದ.ಕ. ಜಿಲ್ಲೆಯ ಆಸ್ಪತ್ರೆಗಳಲ್ಲಿರುವ ಎಲ್ಲಾ ಮೆಡಿಕಲ್ ಅಂಗಡಿಗಳು ತೆರೆದಿರಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಸಾರ್ವಜನಿಕರು ಯಾವುದೇ ಮಾಹಿತಿಗಾಗಿ ಮೆಡ್ಪ್ಲಸ್ ಮತ್ತು ಅಪೋಲೋ ಮೆಡಿಕಲ್ಗಳನ್ನು ಈ ಕೆಳಗಿನ ಸಂಖ್ಯೆಗಳೊಂದಿಗೆ ಸಂಪರ್ಕಿಸಬಹುದು.
ಮಂಗಳೂರು ನಗರ ಮೊ.ಸಂ: ೯೧೦೮೪೬೬೮೨೭, ಮುಲ್ಕಿ ಕಿನ್ನಿಗೋಳಿ, ಮೂಡುಬಿದಿರೆ ೬೩೬೪ ೯೦೮ ೧೭೨/೭೬೨೫೦ ೮೧೩೫೩, , ೨.೨. ೫, ?? ೯೧೮೭೨ ೩೪೪೩೨.
ನೋಡಲ್ ಅಧಿಕಾರಿಗಳಾಗಿರುವ ಮಂಗಳೂರಿನ ಸಹಾಯಕ ಡ್ರಗ್ಸ್ ನಿಯಂತ್ರಕರ (ಮೊ.ಸಂ: ೯೪೪೮೨೦೫೧೭೭ ಮತ್ತು ಸ್ಥಿರದೂರವಾಣಿ ೦೮೨೪-೨೨೧೮೪೫೧)ನ್ನು ಸಂಪರ್ಕಿಸಬಹುದು ಎಂದು ಸಹಾಯಕ ಔಷಧ ನಿಯಂತ್ರಕರ ಪ್ರಕಟನೆ ತಿಳಿಸಿದೆ.






















