Home ಜಿಲ್ಲೆ ಮೈಸೂರು ಮಾಡುವ ಅಗತ್ಯವಿದೆ: ಸಂಸದ ಸುನಿಲ್ ಬೋಸ್

ಮಾಡುವ ಅಗತ್ಯವಿದೆ: ಸಂಸದ ಸುನಿಲ್ ಬೋಸ್

ಸಂಜೆವಾಣಿ ವಾರ್ತೆ
ಚಾಮರಾಜನಗರ.ಮಾ.01:-
ಪತ್ರಕರ್ತರು ಸಮಾಜದ ಹಿತಕ್ಕೆ ಪೂರಕವಾಗಿರುವ ವರದಿ ಮಾಡುವ ಅಗತ್ಯವಿದೆ ಎಂದು ಸಂಸದ ಸುನೀಲ್ ಬೋಸ್ ಸಲಹೆ ನೀಡಿದರು.
ನಗರದ ಜಿಲ್ಲಾ ಕಾರ್ಯನಿರತ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಾಮರಾಜನಗರ ಜಿಲ್ಲಾ ಘಟಕದ ಸದಸ್ಯರಿಗೆ ಅಂಚೆ ಇಲಾಖೆ ಅಪಘಾತ ವಿಮೆ ನೋಂದಣಿ ಕಾರ್ಯಕ್ರಮದಲ್ಲಿ ಅವಘಾತ ವಿಮೆ ಪಾಲಿಸಿ ಬಾಂಡ್ ವಿತರಿಸಿ ಮಾತನಾಡಿದ ಅವರು, ಅನಗತ್ಯವಾದ ವೈಯುಕ್ತಿಕ ವಿಚಾರ ಸುದ್ದಿ ಮಾಡುವುದರಿಂದ ಸಮಾಜಕ್ಕೆ ಯಾವುದೇ ಲಾಭವಿಲ್ಲ, ಜನರಿಗೆ ಉಪಯುಕ್ತವಾದ ಸಂದೇಶಗಳನ್ನು ಕೊಡಬೇಕೇ ಹೊರತು ವೈಯುಕ್ತಿಕ ವಿಷಯಗಳ ಸುದ್ದಿಗಳತ್ತ ಗಮನಹರಿಸಬಾರದು.


ಮಾಧ್ಯಮದವರು ಎಂದಿಗೂ ಮಾರಾಟ ಆಗಬಾರದು. ಮಾರಾಟವಾದರೆ ನೈಜವಾಗಿ ತೋರಿಸುವುದು ಏನು? ಯಾವುದೇ ವ್ಯಕ್ತಿ ಪೂಜೆ ಮಾಡದೆ ಜಾತ್ಯಾತೀತವಾಗಿ ನಾನು ಅಥವಾ ಯಾರೇ ತಪ್ಪು ಮಾಡಿದರೂ ತಪ್ಪು ಎಂದು ತೋರಿಸಬೇಕು ಎಂದು ತಿಳಿಸಿದರು.
ಪತ್ರಕರ್ತರೆಲ್ಲರೂ ಸೇರಿ ಒಂದು ವಿನೂತನವಾದ ವಿಮೆ ಸೌಲಭ್ಯ ಕಾರ್ಯಕ್ರಮ ಮಾಡಿರುವುದು ನಿಜವಾಗಲೂ ತುಂಬಾ ಖುಷಿಯಾಗುತ್ತದೆ. ಎಂದರು. ಮಾಜಿ ಸಂಸದನಾದರೂ ಮಾಜಿ ಸಂಸದನಾದರೂ ಕೂಡ ನಿಮ್ಮ ಅಪಘಾತ ವಿಮೆಗೆ ಧನಸಹಾಯ ಮಾಡಿಕೊಡುತ್ತೇನೆ.


ಪತ್ರಕರ್ತರಿಗೆ ನಿವೇಶನ ಕೊಡಿಸಿಕೊಡಿಸುವಂತೆ ಮನವಿ ಮಾಡಿದ್ದೀರಿ ನಿಮಗೆ ನಿವೇಶನ ಕೊಡಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು
ಅಧ್ಯಕ್ಷತೆ ವಹಿಸಿದ್ದ ಸಂಘದ ಆರ್.ಎನ್.ಸಿದ್ದಲಿಂಗಸ್ವಾಮಿ ಅಧ್ಯಕ್ಷ ಮಾತನಾಡಿ,ಚುನಾವಣೆಯ ಪೂರ್ವದಲ್ಲಿ ನಮ್ಮ ತಂಡ ಅಧಿಕಾರಕ್ಕೆ ಬಂದರೆ ಸಂಘದ ಎಲ್ಲ ಸದಸ್ಯರಿಗೆ ಜೀವವಿಮೆ ಮಾಡಿಸುವುದಾಗಿ ಆಶ್ವಾಸನೆ ನೀಡಿದ್ದೆವು ಅದರಂತೆ ಸಂಘದ ಎಲ್ಲಾ ಸದಸ್ಯರಿಗೆ ಜೀವವಿಮೆ ದೊರೆಯುವಂತೆ ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಹೇಂದ್ರ, ಖಜಾಂಚಿ ಆರ್.ಸಿ. ಪುಟ್ಟರಾಜು ಹಾಗೂ ಸಂಘದ ಸದಸ್ಯರು ಹಾಜರಿದ್ದರು.