Home ಜಿಲ್ಲೆ ಸಾಂಪ್ರದಾಯಿಕ ಕೃಷಿ ಪಾರಂಪರಿಕ ಅಡುಗೆ ಕಲೆ ಮಾಯವಾಗುತ್ತಿದೆ: ಡಾ. ಖಾಜಾವಲಿ ಈಚನಾಳ

ಸಾಂಪ್ರದಾಯಿಕ ಕೃಷಿ ಪಾರಂಪರಿಕ ಅಡುಗೆ ಕಲೆ ಮಾಯವಾಗುತ್ತಿದೆ: ಡಾ. ಖಾಜಾವಲಿ ಈಚನಾಳ

ಶಹಾಪೂರ : ಕವಿವಾಣಿಯ ತಾಯಬೇರಾದ ಜಾನಪದ ಸಾಹಿತ್ಯ ಮನುಷ ಬದುಕಿನ ಎಲ್ಲ ಅವಸ್ಥೆಗಳಲ್ಲಿ ಅದು ಹಾಸುಹೊಕ್ಕಾಗಿದೆ. ಅದು ಕೇವಲ ರಂಜನೆಗಾಗಿ ರಚನೆಯಾದುದಲ್ಲ. ಬದುಕಿನ ಸಂಘರ್ಷ, ಸಂಬಂಧಗಳ ಮಹತ್ವ , ಪ್ರೀತಿ-ಪ್ರೇಮ, ಸ್ತ್ರೀಸಂವೇದನೆ, ಮಾನವೀಯ ಕಾಳಜಿ ಹೀಗೆ ವೈವಿಧ್ಯಮಯ ಅನುಭವಗಳ ಕಣಜವಾಗಿದೆ.ಇಂಥ ಸಮೃದ್ಧವಾದ ಜಾನಪದ ಸಾಹಿತ್ಯ ಆಧುನಿಕ ಜೀವನದ ಭರಾಟೆಯಲ್ಲಿ ಅವನತಿಯ ಹಾದಿ ಹಿಡಿದಿರುವದು ಕಳವಳಕಾರಿ ಸಂಗತಿಯಾಗಿದೆ.ಸಾಂಪ್ರದಾಯಿಕ ಕೃಷಿ ಪಾರಂರಿಕ ಅಡುಗೆ ಕಲೆ ಮಾಯವಾಗುತ್ತಿದೆ. ಇವುಗಳಿಗೆ ಸಂಬಂಧಿಸಿದ ಜಾನಪದ ಸಾಹಿತ್ಯ ಪೆÇೀಷಿಸಿ ಬೆಳೆಸ ಬೇಕಾಗಿದೆ ಎಂದು ಜೇವರ್ಗಿ ತಾಲೂಕಿನ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಖಾಜಾವಲಿ ಈಚನಾಳ ಅಭಿಪ್ರಾಯ ಪಟ್ಟರು.
ಅವರು ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎ.ಬಿ ಘಟಕಗಳು ಹಾಗೂ ರಾಯಚೂರು ಆದಿಕವಿ ವಾಲ್ಮೀಕಿ ಮಹರ್ಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಮೀಪದ ದತ್ತು ಗ್ರಾಮ ದಿಗ್ಗಿ (ಸಂಗಮೇಶ್ವರ ದೇವಸ್ಥಾನ ) ಯಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಸೇವಾ ಶಿಬಿರದಲ್ಲಿ “ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ರಾಜಕುಮಾರ್ ಜಗತಾಪ ಮೌಲ್ಯಗಳಿಂದ ಜೀವನ ಶ್ರೇಷ್ಠವಾಗುತ್ತದೆ ಎಂದು ಹೇಳಿದರು. ದೆ?ಹಿಕ ಶಿಕ್ಷಣ ನಿರ್ದೇಶಕ, ಶಿಬಿರಾಧಿಕಾರಿ ಡಾ. ನಾಗರಡ್ಡಿ ಎಂ. ಭೆ?ರಡ್ಡಿ ಅತಿಥಿಗಳ ಪರಿಚಯ ಮಾಡಿದರು. ಶಿಬಿರದ ಕಾರ್ಯಕ್ರಮಾಧಿಕಾರಿಗಳಾದ ಅಶೋಕ ರಡ್ಡಿ ಪಾಟೀಲ, ಮಹಾದೇವಪ್ಪ ವೇದಿಕೆ ಮೇಲಿದ್ದರು. ಶಿಬಿರಾರ್ಥಿಗಳಾದ ವಿಜಯಲಕ್ಷ್ಮಿ ಸ್ವಾಗತಿ ಸಿದರೆ, ಸಂಗಮೇಶ ನಿರೂಪಿಸಿದರು. ಮಹ್ಮದ್ ಮಕ್ಸೂದ್ ವಂದಿಸಿದರು.