Home ಜಿಲ್ಲೆ ಮೈಸೂರು ಜನ ಜಾನುವಾರುಗಳಿಗೆ ಮೇವು ನೀರು ಒದಗಿಸುವಲ್ಲಿ ಆಡಳಿತ ವರ್ಗ ವಿಫಲ

ಜನ ಜಾನುವಾರುಗಳಿಗೆ ಮೇವು ನೀರು ಒದಗಿಸುವಲ್ಲಿ ಆಡಳಿತ ವರ್ಗ ವಿಫಲ

ಸಂಜೆವಾಣಿ ವಾರ್ತೆ
ಹನೂರು.ಏ.15:-
ಬೇಸಿಗೆಯಲ್ಲಿ ಬರ ಆವರಿಸಿದ್ದರು ನಾಗರಿಕರಿಗೆ ನೀರು ಹಾಗೂ ಜಾನುವಾರುಗಳಿಗೆ ನೀರು ಹಾಗೂ ಮೇವನ್ನು ಒದಗಿಸುವುದರಲ್ಲಿ ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ಧ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಅವರು ತಿಳಿಸಿದರು.
ಹನೂರು ಪಟ್ಟಣದ ಪಶುಸಂಗೋಪನ ಇಲಾಖೆ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಗಡಿಭಾಗದ ನಾಗರೀಕರಿಗೆ ತಿಳಿಸುವಂತೆ ಒತ್ತಾಯಿಸಿ ದಿನಾಂಕ: 17-04-2026 ಶುಕ್ರವಾರ ಬೆಳಿಗ್ಗೆ 10-00 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು.


ಕಳೆದ ಹಲವಾರು ವರ್ಷಗಳಿಂದ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ಬರ ಆವರಿಸಿ ಕುಡಿಯುವ ನೀರಿಗೆ ಹಾಕಾರ ಉಂಟಾಗಿದೆ ಸರ್ಕಾರ ಬೇಸಿಗೆಯಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆ ಉಂಟಾಗದಂತ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಜಿಲ್ಲಾಡಳಿತ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಬಗೆಹರಿಸುವುದರಲ್ಲಿ ವಿಫಲವಾಗಿದೆ.


ಪಂಚಾಯಿತಿ ವ್ಯಾಪ್ತಿಯಲ್ಲಿ ಈ-ಸ್ವತ್ತು ಸಮಸ್ಯೆ ಬಗೆಹರಿಸುವುದರಲ್ಲಿ ಪಂ. ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ. ಮಾರ್ಟಳ್ಳಿ ಗ್ರಾಮ ಪಂ. ಜಿಲ್ಲೆಯ ಗಡಿ ಭಾಗವಾಗಿದ್ದು ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ ಸುಮಾರು 45ಕ್ಕೂ ಹೆಚ್ಚು, ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಇಲಾಖೆಗಳು ತಮ್ಮ ಇಲಾಖೆಗಳಿಂದ ನಾಗರಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಚಳುವಳಿಯ ದಿವಸ ಮಾಹಿತಿ ನೀಡಬೇಕು.
ಹನೂರು ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು, ಗೋಶಾಲೆಗಳನ್ನು ತೆರೆಯಬೇಕು ಹಾಗೂ ಸೀಮೆ ಹಸುಗಳಿಗೆ ಮೇವನ್ನು ಆಯಾ ರೈತರಿಗೆ ನೀಡಿ ಮೇವಿನ ಸಮಸ್ಯೆ ಬಗೆಹರಿಸಬೇಕು ಪೆÇೀಡಿ ಸಮಸ್ಯೆ ಬಗೆಹರಿಸಬೇಕು, ಈ-ಸ್ವತ್ತು ಸಮಸ್ಯೆಗಳನ್ನು ಬಗೆಹರಿಸಬೇಕು, ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಚಳುವಳಿ ಸ್ಥಳಕ್ಕೆ ಆಗಮಿಸಿ, ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಎಂ.ಇ ಬಸವರಾಜು, ಮಾರ್ಟಳ್ಳಿ ಘಟಕ ರೈತ ಸಂಘದ ಅಧ್ಯಕ್ಷ ಅರ್ಪುದರಾಜ್, ವಸಂತ ಕುಮಾರ್, ಪುಟ್ಟಸ್ವಾಮಿ, ಡೇವಿಡ್, ಸಗಾಯರಾಜ್, ಲಾರೆನ್ಸ್, ರಾಜ, ಲೂರ್ದುಸ್ವಾಮಿ, ವಲ್ಲಭದಾಸ್, ಸಂದನಮೇರಿ, ಜೆಸ್ಸಿಂತ ಹಾಗೂ ಇನ್ನಿತರರು ಇದ್ದರು.