Home Uncategorized ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಉತ್ತಮ ಫಲಿತಾಂಶ ಪಡೆದ ಶಾಲಾ ಮುಖ್ಯಗುರುಗಳಿಗೆ ಸನ್ಮಾನ

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಉತ್ತಮ ಫಲಿತಾಂಶ ಪಡೆದ ಶಾಲಾ ಮುಖ್ಯಗುರುಗಳಿಗೆ ಸನ್ಮಾನ

ಸಂಜೆವಾಣಿ ವಾರ್ತೆ

ಸಿರುಗುಪ್ಪ, ಏ.29: ಈ ಬಾರಿ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಶಿಕ್ಷಣ ಇಲಾಖೆಯ ಸಿಬ್ಬಂದಿ ಮತ್ತು ಶಿಕ್ಷಕರು ಸಾಕಷ್ಟು ಶ್ರಮ ವಹಿಸಿದ್ದಾರೆ. ಉತ್ತಮ ಫಲಿತಾಂಶಕ್ಕೆ ಕಾರಣರಾದ ಎಲ್ಲರಿಗೆ ಅಭಿನಂದನೆಗಳು ಎಂದು ಶಾಸಕ ಬಿ ಎಂ ನಾಗರಾಜ್ ತಿಳಿಸಿದರು.

ನಗರದ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂಕಗಳಿಸಿದ ನಾಲ್ಕು ಜನ ವಿದ್ಯಾರ್ಥಿಗಳು, ಮತ್ತು ಶೇಕಡ ನೂರರಷ್ಟು ಫಲಿತಾಂಶ ಪಡೆದ ಐದು ಸರ್ಕಾರಿ ವಸತಿ ಶಾಲೆಗಳ ಪ್ರಾಂಶುಪಾಲರಿಗೆ, 5 ಸರ್ಕಾರಿ ಶಾಲೆಗಳ ಮುಖ್ಯ ಗುರುಗಳಿಗೆ, ಆರು ಖಾಸಗಿ ಶಾಲೆಗಳ ಮುಖ್ಯ ಗುರುಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡರೆ, ಮುಂದಿನ ಉನ್ನತ ಶಿಕ್ಷಣ ಪಡೆಯಲುಪ್ರಸಿದ್ಧ ಕಾಲೇಜುಗಳಲ್ಲಿ ಸೀಟು ದೊರೆಯಲು ಸಾಧ್ಯವಾಗುತ್ತದೆ.

 ಶಿಕ್ಷಕರ ಕೊರತೆಯ ನಡುವೆಯೂ ಸಿರುಗುಪ್ಪ ತಾಲೂಕಿನಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದು, ಸಂತೋಷದ ವಿಷಯವಾಗಿದೆ, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮವಾದ ಬೋಧನೆಯನ್ನು ಕೊಡಬೇಕೆಂದು ಹೇಳಿದರು.

ಬಿ ಇ ಓ ಎಚ್ ಗುರಪ್ಪ ಮಾತನಾಡಿದರು. ತಹಸಿಲ್ದಾರ್ ಗೌಶಿಯ ಬೇಗಂ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ತಮ್ಮನ ಗೌಡ ಪಾಟೀಲ್, ಎಸ್ ಎಸ್ ಎಲ್ ಸಿ ತಾಲೂಕು ನೋಡಲ್ ಅಧಿಕಾರಿ ಸುರೇಶ್, ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಕಾಶಿಮ್ ಸಾಹೇಬ್, ಮುಖ್ಯ ಗುರುಗಳಾದ ವೆಂಕಟೇಶ್ ಯಾದವ, ಭಾಗ್ಯಮ್ಮ,ಎಸ್ ಚಂದ್ರ ಮೌಳಿ, ರಾಮಕೃಷ್ಣ, ಶಿಕ್ಷಕರಾದ ಅರುಣ್ ಪ್ರತಾಪ್ ರೆಡ್ಡಿ, ಜ್ಞಾನೇಶ್, ನಿವೃತ್ತ ಶಿಕ್ಷಕರಾದ ಹನುಮನ ಗೌಡ, ಎಚ್ ಶ್ರೀಧರ, ಹನುಮಂತಪ್ಪ, ಲಿಪಿಕಾರ ಸಂಘದ ಅಧ್ಯಕ್ಷ ಪ್ರಹ್ಲಾದ್ ಇನ್ನಿತರರು ಇದ್ದರು.