Home Uncategorized ವಿಕಲಚೇತನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಜಿಲ್ಲಾಧಿಕಾರಿ ಸೂಚನೆ

ವಿಕಲಚೇತನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಜಿಲ್ಲಾಧಿಕಾರಿ ಸೂಚನೆ

ವಿಜಯನಗರ ಏ.29 ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದಆದ್ಯತೆಯಾಗಿದ್ದು, ಅವರ ಕುಂದುಕೊರತೆಗಳಿಗೆ ಅಧಿಕಾರಿಗಳು ವಿಳಂಬ ಮಾಡದೆತಕ್ಷಣ ಸ್ಪಂದಿಸಬೇಕು ಎಂದುಜಿಲ್ಲಾಧಿಕಾರಿಕವಿತಾಎಸ್, ಮನ್ನಿಕೇರಿ ತಿಳಿಸಿದರು.

ನಗರದಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರಕುಂದುಕೊರತೆ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಕಲಚೇತನರಿಗೆ ಸರ್ಕಾರದಿಂದ ಸಿಗಬೇಕಾದ ಮಾಸಾಶನ, ಸಾಧನ ಸಲಕರಣೆಗಳು ಹಾಗೂ ಬಸ್ ಪಾಸ್ ವಿತರಣೆಯಲ್ಲಿಯಾವುದೇ ಲೋಪವಾಗದಂತೆಎಚ್ಚರ ವಹಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದಅವರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ವಿಕಲಚೇತನರಿಗೆ ಮೀಸಲಿರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸೂಚಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ನೂರಾರು ವಿಕಲಚೇತನರು ವಿವಿಧ ಇಲಾಖೆಗಳಲ್ಲಿ ತಮಗೆ ಸಿಗಬೇಕಾದ ಸೌಲಭ್ಯ, ಸಾಧನ ಸಲಕರಣೆ ಸಕಾಲದಲ್ಲಿದೊರೆಯುತ್ತಿಲ್ಲ. ಇದರಿಂದ ವಿಕಲಚೇನರಿಗೆತೀವ್ರ ಸಮಸ್ಯೆಎದುರಾಗುತ್ತಿದೆ.ಆದ್ದರಿಂದ ಯೋಜನೆಗಳಲ್ಲಿ ತಮಗಾಗುತ್ತಿರುವ ತೊಂದರೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಇದಕ್ಕೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಅಗತ್ಯಕ್ರಮ ವಹಿಸಲಾಗುವುದುಎಂದು ಸಕಾರಾತ್ಮವಾಗಿ ಸ್ಪಂದಿಸಿದರು.

ಈ ವೇಳೆ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಮಾತನಾಡಿ, 2025-26ನೇ ಸಾಲಿನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಇಲಾಖೆಯ ವತಿಯಿಂದಜಿಲ್ಲೆಯಾದ್ಯಂತ 532 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 150 ಫಲಾನುಭವಿಗಳಿಗೆ ಗ್ರಾಮೀಣ ಪುನರ್ವಸತಿಯೋಜನೆ, 106 ಅಹ ಫಲಾನುಭವಿಳಿಗೆ ಆರೈಕೆದಾರರ ಪ್ರೋತ್ಸಾಹ ನಿಧಿ, 31 ವಿಕಲಾಂಗ ವಿದ್ಯಾರ್ಥಿಗಳಿಎ ಶುಲ್ಕ ಮರುಪಾವತಿ ಮಾಡಲಾಗಿದೆ. ಅದಷ್ಟೇ ಅಲ್ಲದೇ ಆಧಾರ ಯೋಜನೆಯಡಿ 32 ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ತಲಾ ರೂ.50,000ಆರ್ಥಿಕ ನೆರವು ನೀಡಲಾಗಿದೆ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ರೂ.2,000 ಹಾಗೂ 6 ರಿಂದ 10ನೇ ತರಗತಿಯವರಿಗೆ ರೂ.4,000 ವಿತರಿಸಲಾಗುವುದು. 7 ವಿಶೇಷಚೇತನ ದಂಪತಿಗಳಿಗೆ ರೂ.3.50 ಲಕ್ಷ ವಿವಾಹ ಪ್ರೋತ್ಸಾಹಧನ ವಿತರಣೆ ಮಾಡಲಾಗಿದೆ.ರಾಷ್ಟ್ರ ಮತ್ತುಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಗರಿಷ್ಠ ರೂ.50,000 ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಈ ಬಾರಿಇಬ್ಬರು ಕ್ರೀಡಾಪಟುಗಳಿಗೆ ರೂ.70,000 ವಿತರಿಸಲಾಗಿದೆ. ಸಂಸದರ ಮತ್ತು ಶಾಸಕರ ನಿಧಿಯಿಂದ ಈಗಾಗಲೇ ವೀಲ್‍ಚೇರ್, ಶ್ರವಣ ದೋಷವುಳ್ಳವರಿಗೆ ಸಾಧನಗಳು ಮತ್ತುತ್ರಿಚಕ್ರ ವಾಹನಗಳನ್ನು ವಿತರಿಸಲುಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಗಂಗಪ್ಪ, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕ ಮನೋಹರ್, ವಿವಿಧ ಇಲಾಖೆಗಳ ಜಿಲ್ಲಾ ಮತ್ತುತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.