Home ಜಿಲ್ಲೆ ಕಲಬುರಗಿ ಲಾರಿ ಟ್ಯಾಂಕರ್ ಕಾರು ನಡುವೆ ಅಪಘಾತ

ಲಾರಿ ಟ್ಯಾಂಕರ್ ಕಾರು ನಡುವೆ ಅಪಘಾತ

ಕಲಬುರಗಿ,ಏ.29-ಲಾರಿ ಟ್ಯಾಂಕರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿರುವ ಘಟನೆ ಫರಹತಾಬಾದ ಬಳಿ ಇಂದು ನಡೆದಿದೆ.
ಅಪಘಾತದಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡುಚಣೆಯುಂಟಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.