Home ಜಿಲ್ಲೆ ಬೆಂಗಳೂರು ಚಾಮುಂಡಿನಗರದಲ್ಲಿ ಕಾರ್ಮಿಕರಿಗೆ ಕೌಶಲ್ಯ ತರಬೇತಿ: ಉಚಿತ ಕಿಟ್ ವಿತರಿಸಿದ ಮುರುಗನ್

ಚಾಮುಂಡಿನಗರದಲ್ಲಿ ಕಾರ್ಮಿಕರಿಗೆ ಕೌಶಲ್ಯ ತರಬೇತಿ: ಉಚಿತ ಕಿಟ್ ವಿತರಿಸಿದ ಮುರುಗನ್

Free Kits Distributed at Chamundinagar Ward

ಬೆಂಗಳೂರು,ಏ29: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚಾಮುಂಡಿನಗರದ ಚಾಮುಂಡೇಶ್ವರಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ವತಿಯಿಂದ ಸುಮಾರು 300 ನೊಂದಾಯಿತ ಕಾರ್ಮಿಕರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ತರಬೇತಿ ವಿವರ: ಕಾರ್ಮಿಕರ ಕೌಶಲ್ಯ ಅಭಿವೃದ್ಧಿಗಾಗಿ ಆರ್‌ಪಿಎಲ್ (RPL) ಮತ್ತು ಬ್ರಿಡ್ಜ್‌ ಕೋರ್ಸ್‌ಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸಿದ ಎಲ್ಲಾ ಕಾರ್ಮಿಕರಿಗೆ ಉಚಿತವಾಗಿ ಪರಿಕರಗಳ ಕಿಟ್‌ಗಳನ್ನು ವಿತರಿಸಲಾಯಿತು.

ನೇತೃತ್ವ: ಈ ಕಾರ್ಯಕ್ರಮವು ಮಂಡಳಿಯ ಅಧ್ಯಕ್ಷರಾದ ಮುರುಗನ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.

ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಮಂಡಳಿಯ ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಚಾಮುಂಡಿನಗರ ವಾರ್ಡ್‌ನ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು ಕಾರ್ಮಿಕರಿಗೆ ಮಾರ್ಗದರ್ಶನ ನೀಡಿದರು.