Home ಜಿಲ್ಲೆ ಕಲಬುರಗಿ ಮೇ 1 ರಿಂದ ಭೈರಾಮಡಗಿ ದಾವಲಮಲೀಕ ದರ್ಗಾ ಜಾತ್ರಾ ಮಹೋತ್ಸವ

ಮೇ 1 ರಿಂದ ಭೈರಾಮಡಗಿ ದಾವಲಮಲೀಕ ದರ್ಗಾ ಜಾತ್ರಾ ಮಹೋತ್ಸವ

ಕಲಬುರಗಿ:ಏ.29: ಹಿಂದೂ ಮುಸಲ್ಮಾನ ಭಾವೈಕ್ಯತಾ ಸಂಕೇತದ ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಹಜರತ್ ದಾವಲ್ ‌ಮಲೀಕ ಜಾತ್ರಾ ಮಹೋತ್ಸವ ಇದೇ ಮೇ 12 ರಿಂದ ಮೂರು ದಿನಗಳ ಕಾಲ ವರ್ಷಂಪ್ರತಿಯಂತೆ ಜರುಗಲಿದೆ.

ಹಿಂದೂಗಳು ಮಲ್ಲಿಸಾಬನೆಂದು ಹಾಗೂ ಮುಸಲ್ಮಾನರು ದಾವಲಮಲೀಕರೆಂದು ಕರೆಯುವ ಭಾವೈಕ್ಯತಾ ಸಂಕೇತದ ಈ ದಾವಲಮಲೀಕ ಜಾತ್ರಾ ಮಹೋತ್ಸವದಲ್ಲಿ ರಾಜ್ಯವಲ್ಲದೇ ಮಹಾರಾಷ್ಟೖ, ಆಂಧ್ರಪ್ರದೇಶ ರಾಜ್ಯಗಳಿಂದಲೂ ಭಕ್ತರು ಭಾಗವಹಿಸುತ್ತಾರೆ.

ಮೇ 1ರ ಶುಕ್ರವಾರದಂದು ರಾತ್ರಿ 8 ಗಂಟೆಯಿಂದ ಗುರುವಿನ ಗಂಧ ಕಳಸವು ವಿಶ್ವಕರ್ಮ ಪೂಜಾರಿಗಳ ಮನೆಯಿಂದ ಮಕ್ಕಳ ಚಿಣಿಕೋಲ ಆಟದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ರಾತ್ರಿ 11 ಕ್ಕೆ ಮಂದಿರಕ್ಕೆ ಬಂದು ತಲುಪುವುದು. ದಿ. 2 ರಂದು ಮಹಾ ದೀಪೋತ್ಸವ ನಡೆಯಲಿದ್ದು, ಅಂದು ಬೆಳಿಗ್ಗೆಯಿಂದ ಸಂಜೆವರೆಗೆ ಸದ್ಭಕ್ತರಿಂದ ಹರಕೆಯ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಮೇಳಗಳಿಂದ ಗೀ ಗೀ ಪದಗಳು ಜರುಗಲಿವೆ.

ಮರು ದಿನ ಮೇ.3ರಂದು ರವಿವಾರ ಬೆಳಿಗ್ಗೆ ಭಾಸಿದೀಪ ಹಾಗೂ ಅಂದೇ ಸಾಯಂಕಾಲ 4ಕ್ಕೆ ಪ್ರಸಿದ್ಧ ಫೈಲ್ವಾನರ ಕುಸ್ತಿ ಪಂದ್ಯಗಳು ಜರುಗಲಿವೆ. ಭಾವೈಕ್ಯತಾ ಸಂಕೇತದ ದಾವಲಮಲೀಕ ಜಾತ್ರಾ ಮಹೋತ್ಸವದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಕ್ತ ಮಂಡಳಿ ಕೋರಿದೆ.