Home ಜಿಲ್ಲೆ ಕಲಬುರಗಿ ಸಲಗರ ಬಸಂತಪುರ ಗ್ರಾಮಕ್ಕೆ ಜಿಪಂ ಸಿಇಒ ಭೇಟಿ

ಸಲಗರ ಬಸಂತಪುರ ಗ್ರಾಮಕ್ಕೆ ಜಿಪಂ ಸಿಇಒ ಭೇಟಿ

ಚಿಂಚೋಳಿ,ಮೇ 5: ತಾಲೂಕಿನ ಸಲಗರ ಬಸಂತಪುರ ಗ್ರಾಮಕ್ಕೆ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್ ಮೀನಾ, ಅವರು ದಿಢೀರ್ ಭೇಟಿ ನೀಡಿ ಸಲಗರ ಬಸಂತಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಆಲಿಸಿದರು
ನೀರಿನ ಸಮಸ್ಯೆ ಆಗದಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮ ಪಂಚಾಯತ್ ಅಳವಳಿಸಿದ ಬೋರಿಂಗ್ ನೀರನ್ನು ಅವರು ಕುಡಿದು ಗಮನ ಸೆಳೆದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಚೌವ್ಹಾಣ್, ವಾಟರ್ ಸಪ್ಲೈ ಇಲಾಖೆ ಅಧಿಕಾರಿ ಉಮೇಶ್ ರಾಠೋಡ್, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ತುಮಕುಂಟ, ಯುವರಾಜ್ ರಾಠೋಡ, ಮಲ್ಲಿಕಾರ್ಜುನ್ ಪಾಟೀಲ, ಮತ್ತು ಗ್ರಾಮದ ಅನೇಕ ಮುಖಂಡರು ಇದ್ದರು