Home ಜಿಲ್ಲೆ ಕಲಬುರಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು:ಡಾ. ಅಜಯಸಿಂಗ್ ಹರ್ಷ

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು:ಡಾ. ಅಜಯಸಿಂಗ್ ಹರ್ಷ

ಕಲಬುರಗಿ,ಮೇ.5: ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರದ ಉಪಚುನಾವಣೆಯಲ್ಲಿ ಜಯ ದಾಖಲಿಸಿರುವ ಕಾಂಗ್ರೆಸ್‍ನ ಉಮೇಶ್ ಮೇಟಿ ಹಾಗೂ ಸಮರ್ಥ್ ಶಾಮನೂರು ಅವರಿಗೆ ಅಭಿನಂದಿಸಿರುವ ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಸರ್ಕಾರದ ಪಂಚ ಗ್ಯಾರಂಟಿಗೆ ಜನರ ಅಭೂತಪೂರ್ವ ಬೆಂಬಲ ದೊರಕಿದೆ ಎಂಬುದನ್ನು ಈ ಫಲಿತಾಂಶ ಸಾಬೀತು ಮಾಡಿದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಜನಪರ ಯೋಜನೆಗಳಿಗೆ ಈ ಗೆಲುವು ಸಾಕ್ಷಿಯಾಗಿದೆ ಎಂದೂ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಡಾ. ಅಜಯ್ ಧರ್ಮಸಿಂಗ್ ಅವರು ಚುನಾವಣೆ ಉಸ್ತುವಾರಿ ವಹಿಸಿಕೊಂಡ ಕೇರಳದ ರಾಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ಯಾಜಾಕುಲಂ ಮಧು ಅವರು ಗೆಲವು ಸಾಧಿಸಿದ್ದಾರೆ. ಡಾ. ಅಜಯ್ ಸಿಂಗ್ ಪಕ್ಷದ ಉಸ್ತುವಾರಿಯಾಗಿ ಹೋದ ಕಡೆಗಳಲ್ಲೆಲ್ಲಾ ಗೆಲವು ಕಟ್ಟಿಟ್ಟ ಬುತ್ತಿ ಎಂದು ಅಭಿಮಾನಿಗಳು ಹರ್ಷದಲ್ಲಿದ್ದಾರೆ.