
ಕಲಬುರಗಿ,ಮೇ.5: ಇಲ್ಲಿನ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀರಾಮ ಸೇವಾ ಪರಿಷತ್ ವತಿಯಿಂದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಮಾಚಾರ್ಯ ಘಂಟಿ, ಹರಿಪ್ರಸನ್ನ ಚಿತ್ತಾಪುರ, ಪಿ.ವಿ ಜೋಶಿ, ಲಕ್ಷ್ಮೀಕಾಂತ ಮೋಹಿರ, ಶಾಮರಾವ ಬಂಕೂರ್ ಹಾಗೂ ಅರ್ಚಕರಾದ ಗುಂಡಾಚಾರ್ಯ ನರಿಬೋಳ ಅವರು ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗುಂಡಾಚಾರ್ಯ ನರಿಬೋಳ ಅವರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡುವಾಗ ಪಾಲಕರು ಗಮನಹರಿಸಿ ಅವರಿಗೆ ಮಾರ್ಗದರ್ಶನ ಮಾಡಬೇಕು. ಅತಿಯಾದ ಒತ್ತಡವನ್ನು ಮಕ್ಕಳಮೇಲೆ ಹೆರಬಾರದು. ವಿದ್ಯಾಭ್ಯಾಸದ ಜೊತೆ ಸಂಸ್ಕøತಿ ಸಂಸ್ಕಾರ ಬೆಳೆಸಲು ಭಗವದ್ಗೀತೆ, ರಾಮಾಯಣ ಹಾಗೂ ಮಹಾಭಾರತದಂತ ಗ್ರಂಥಗಳನ್ನು ಓದಲು ತಿಳಿಸಿ ಎಂದು ಹೇಳಿದರು.
ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪ್ರಸನ್ನ ದೇಶಪಾಂಡೆ, ಪ್ರಮೋದ ಪಂತ, ನರಸಿಂಹ ಅಗ್ನಿಹೋತ್ರಿ, ಗುರುರಾಜ್ ಬಂಕೂರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.






















