
ಟೆಹರಾನ್, ಮೇ ೪- ಪಾಕಿಸ್ತಾನದ ಮೂಲಕ ಕಳುಹಿಸಲಾದ ೧೪ ಅಂಶಗಳ ಪ್ರಸ್ತಾವನೆಗೆ ಅಮೆರಿಕದ ಪ್ರತಿಕ್ರಿಯೆ ಬಂದಿದ್ದು ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ೩೦ ದಿನಗಳಲ್ಲಿ ಪರಿಹರಿಸಬೇಕು ಮತ್ತು ಕದನ ವಿರಾಮ ವಿಸ್ತರಿಸುವ ಬದಲು ಯುದ್ಧ ಕೊನೆಗೊಳಿಸುವ ಗುರಿ ಹೊಂದಿದಲಾಗಿದೆ ಎಂದು ಇರಾನ್ ತಡರಾತ್ರಿ ತಿಳಿಸಿದೆ.
ಇರಾನ್‌ನ ಪ್ರಸ್ತಾವನೆಗೆ ಅಮೆರಿಕ ತನ್ನ ಪ್ರತಿಕ್ರಿಯೆಯನ್ನು ಪಾಕಿಸ್ತಾನದ ಮೂಲಕ ತಿಳಿಸಿದೆ ಮತ್ತು ಇರಾನ್ ಈಗ ಅದನ್ನು ಪರಿಶೀಲಿಸುತ್ತಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಅಮೆರಿಕದ ಪ್ರತಿಕ್ರಿಯೆಯ ಬಗ್ಗೆ ಅಮೇರಿಕಾ ಅಥವಾ ಪಾಕಿಸ್ತಾನದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಪ್ರತಿಕ್ರಿಯಿಸಿ “ಈ ಹಂತದಲ್ಲಿ ಪರಮಾಣು ಮಾತುಕತೆ ನಡೆಸುವುದಿಲ್ಲ ಎಂದು ಹೊಂದಿಲ್ಲ”, ಯುದ್ಧ ಮುಗಿಯುವವರೆಗೆ ಪರಮಾಣು ವಿಷಯಗಳ ಕುರಿತು ಮಾತುಕತೆಗಳನ್ನು ಬದಿಗಿಡುವ ಇರಾನ್‌ನ ಪ್ರಸ್ತಾಪ ಸ್ಪಷ್ಟವಾಗಿದೆ ಎಂದಿದ್ದಾರೆ.
ಇದಕ್ಕೂ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದರು ಆದರೆ ಅದು ಒಪ್ಪಂದಕ್ಕೆ ಕಾರಣವಾಗುತ್ತದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಇಸ್ಲಾಮಿಕ್ ಕ್ರಾಂತಿಯ ನಂತರ ಕಳೆದ ೪೭ ವರ್ಷಗಳಲ್ಲಿ ಮಾನವೀಯತೆ ಮತ್ತು ಜಗತ್ತಿಗೆ ಮಾಡಿದ್ದಕ್ಕೆ ಇನ್ನೂ ಸಾಕಷ್ಟು ದೊಡ್ಡ ಬೆಲೆಯನ್ನು ಪಾವತಿಸಿಲ್ಲ” ಎಂದು ಹೇಳಿದ್ದರು.
ಇರಾನ್‌ನ ರಾಜ್ಯ-ಸಂಬಂಧಿತ ಮಾಧ್ಯಮಗಳ ಪ್ರಕಾರ, ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ೩೦ ದಿನಗಳಲ್ಲಿ ಪರಿಹರಿಸಬೇಕು ಮತ್ತು ಕದನ ವಿರಾಮ ವಿಸ್ತರಿಸುವ ಬದಲು ಯುದ್ಧ ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಇರಾನ್ ಖಚಿತಪಡಿಸಿದೆ.
ಅಮೆರಿಕ ಮತ್ತು ಇಸ್ರೇಲ್ ನಾಲ್ಕು ವಾರಗಳ ಹಿಂದೆ ಇರಾನ್ ವಿರುದ್ಧದ ಬಾಂಬ್ ದಾಳಿ ಕಾರ್ಯಾಚರಣೆ ಸ್ಥಗಿತಗೊಳಿಸಿದವು ಮತ್ತು ಅಮೆರಿಕ ಮತ್ತು ಇರಾನಿನ ಅಧಿಕಾರಿಗಳು ಒಂದು ಸುತ್ತಿನ ಮಾತುಕತೆ ನಡೆಸಿದೆ. ಆದರೆ ಮುಂದಿನ ಸಭೆಗಳನ್ನು ಏರ್ಪಡಿಸುವ ಪ್ರಯತ್ನಗಳು ಇಲ್ಲಿಯವರೆಗೆ ವಿಫಲವಾಗಿವೆ ಎಂದು ಹೇಳಲಾಗಿದೆ.
ಇರಾನ್‌ನ ಇತ್ತೀಚಿನ ಪ್ರಸ್ತಾವನೆಯನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದು, ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳನ್ನು ಕೈಬಿಡುವಾಗ, ಯುದ್ಧ ಕೊನೆಗೊಳಿಸಿ ಹಡಗು ಬಿಕ್ಕಟ್ಟನ್ನು ಮೊದಲು ಪರಿಹರಿಸುವ ಉದ್ದೇಶವನ್ನು ಇರಾನ್ ಹೊಂದಿದೆ ಎಂದು ತಿಳಿಸಿದ್ದಾರೆ.

























