Home ಜಿಲ್ಲೆ ಕಲಬುರಗಿ ನಿಮ್ಮ ಮತವೇ ನಿಮ್ಮ ಭವಿಷ್ಯದ ನಿರ್ಧಾರ

ನಿಮ್ಮ ಮತವೇ ನಿಮ್ಮ ಭವಿಷ್ಯದ ನಿರ್ಧಾರ

ಕಲಬುರಗಿ,ಜು.12: ಹೆಸರು ಇಲ್ಲದಿದ್ದರೆ ಮತವಿಲ್ಲ, ಮತವಿಲ್ಲದಿದ್ದರೆ ಧ್ವನಿಯಿಲ್ಲ ನಿಮ್ಮ ಮತವೇ ನಿಮ್ಮ ಭವಿಷ್ಯದ ನಿರ್ಧಾರವಾಗಲಿದೆ ಎಂದು ಸ್ಟೇಷನ್ ಬಜಾರ್ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ
ಮತದಾರರ ಸಾಕ್ಷರತಾ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಎನ್‍ಎಸ್ ಎಸ್ ವಿಭಾಗೀಯ ಅಧಿಕಾರಿ ಡಾ. ಚಂದ್ರಶೇಖರ್ ದೊಡ್ಡಮನಿ ಮಾತನಾಡಿದರು.ಪಟ್ಟಿ ಶುದ್ಧವಾದಷ್ಟೂ ಪ್ರಜಾಪ್ರಭುತ್ವ ಬಲವಾಗುತ್ತದೆ, ಇದರ ಮಹತ್ವವನ್ನು ಮನಗಂಡು ವಿದ್ಯಾರ್ಥಿಗಳು ತಮ್ಮ ಹಳ್ಳಿಗಳಲ್ಲಿ, ಏರಿಯಾದಲ್ಲಿ ನಾಗರಿಕರನ್ನು ಜಾಗೃತಿ ಮಾಡಿ ಯಾರು ಕೂಡಾ ಹೊರಗಡೆ ಉಳಿಯದಂತೆ ನೋಡಿಕೊಳ್ಳಬೇಕು ಎಂದರು.
ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯಶಾಸ್ತ್ರ ಉಪನ್ಯಾಸಕ ಸಿದ್ದಲಿಂಗಪ್ಪ ಪೂಜಾರಿ ಉಪನ್ಯಾಸ ನೀಡಿ ಮತದಾನ ಪೂರ್ಣ ಪ್ರಮಾಣದಲ್ಲಿ ಆಗಬೇಕಾದರೆ ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬರ ಹೆಸರು ಇರುವ ಹಾಗೆ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಬಿ ಎಲ್ ಓ ಗಳ ಜೊತೆ ನಾಗರಿಕರು ಕೈಜೋಡಿಸಬೇಕು. ಎಲ್ಲ ದಾನಗಳಲ್ಲಿ ಮತದಾನ ಶ್ರೇಷ್ಠದಾನವಾಗಿದೆ ಎಂದು ತಿಳಿದು ಪ್ರತಿಯೊಬ್ಬ ವ್ಯಕ್ತಿಯೂ ಸಹ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಹಾಗೆ ನೋಡಿಕೊಳ್ಳಬೇಕು. ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಬಿರಾದರ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ತಮ್ಮ ಪಾಲಕರಿಗೆ ಹಾಗೂ ತಮ್ಮ ಪರಿಚಯಸ್ತರಿಗೆ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಬೇಕು. ಸ್ವಯಂಸೇವಕರು ಆಯೋಗದ ಮಹತ್ವದ ಕಾರ್ಯಕರ್ತ ದಲ್ಲಿ ಸ್ವಯಂ ಪ್ರೇರಿತವಾಗಿ ಕೈಜೋಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ತೋರು ಫಲಕಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಉಂಟುಮಾಡಲಾಯಿತು.ಗೌರವ ಉಪಸ್ಥಿತಿ ಮತದಾರರ ಸಾಕ್ಷರತಾ ಸಂಘದ ಸಂಯೋಜಕ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಪಾಂಡು ಎಲ್ ರಾಠೋಡ್, ಉಪನ್ಯಾಸಕರುಗಳಾದ ವಿಜಯಲಕ್ಷ್ಮಿ ರೆಡ್ಡಿ, ಶಶಿಧರ್ ಭೂಸನೂರ್ ಶ್ರೀಶೈಲ ಖುರದ ಪಲ್ಲವಿ ಕುಲಕರ್ಣಿ ಡಾ.ಶಿವಪ್ಪ ಹುಣಚಾಳ ಉಪಸ್ಥಿತರಿದ್ದರು.