Home ಜಿಲ್ಲೆ ಯೋಗದಿಂದ ಆರೋಗ್ಯಕರ ಜೀವನ ಸಾಧ್ಯ

ಯೋಗದಿಂದ ಆರೋಗ್ಯಕರ ಜೀವನ ಸಾಧ್ಯ


ಗದಗ,ಜೂ.೨೩: ಪ್ರತಿದಿನ ಯೋಗ ಮಾಡುವವರಿಂದ ಮಾನಸಿಕ ದೈಹಿಕ ಹಾಗೂ ಆಧ್ಯಾತ್ಮಿಕ ಆರೋಗ್ಯಕರ ಜೀವನ ಪಡೆಯಲು ಸಾಧ್ಯವಾಗಲಿದೆ ಎಂದು ಪ್ರಧಾನ ಅಂಚೆ ಪಾಲಕರಾದ ಶರಣಪ್ಪ ನಾಯ್ಕರ ಹೇಳಿದರು.


ಭಾರತೀಯ ಅಂಚೆ ಇಲಾಖೆಯ ಗದಗ ವಿಭಾಗೀಯ ಕಚೇರಿ ಹಾಗೂ ಮನರಂಜನಾ ಕೂಟದ ಆಶ್ರಯದಲ್ಲಿ ಪ್ರಧಾನ ಅಂಚೆ ಕಚೇರಿಯಲ್ಲಿ ಈಶ್ವರಿ ವಿಶ್ವವಿದ್ಯಾಲಯದ ಅಕ್ಕ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿದ್ದ ಅಂತರರಾಷ್ಟಿçÃಯ ಯೋಗ ದಿನದಲ್ಲಿ ಪಾಲ್ಗೊಂಡು ಚಾಲನೆ ನೀಡಿ ಅವರು ಮಾತನಾಡಿ, ಯೋಗಾಭ್ಯಾಸದಿಂದ ದೇಹದ ಲವಲವಿಕೆ ಹೆಚ್ಚುತ್ತದೆ, ಒತ್ತಡ ಕಡಿಮೆಯಾಗುತ್ತದೆ, ಮನಸ್ಸು ಶಾಂತವಾಗುತ್ತದೆ ಹಾಗೂ ಏಕಾಗ್ರತೆ ವೃದ್ಧಿಯಾಗುತ್ತದೆ ಎಂದರು.


ಇAದಿನ ವೇಗದ ಜೀವನದಲ್ಲಿ ಯೋಗವು ಮಾನಸಿಕ ನೆಮ್ಮದಿ ಮತ್ತು ದೈಹಿಕ ಸದೃಢತೆಯನ್ನು ಕಾಪಾಡುವ ಪರಿಣಾಮಕಾರಿ ಸಾಧನವಾಗಿದೆ ಎಂದರು.
ರೋಣ ಉಪ ವಿಭಾಗದ ಅಂಚೆ ನಿರೀಕ್ಷ ವೆಂಕಟೇಶರಡ್ಡಿ ಕೊಳ್ಳಿ ಅವರು ಮಾತನಾಡಿ, ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರತಿಯೊಬ್ಬರಿಗೂ ಯೋಗದ ಅಗತ್ಯವಿದೆ ಎಂದರು.
ದಿನನಿತ್ಯ ಯೋಗ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ರೋಗ-ರುಜಿನಗಳಿಂದ ದೂರವಿರಲು ಅನುಕೂಲವಾಗಿದೆ. ಅಷ್ಟೇ, ಅಲ್ಲದೇ ಯೋಗದಿಂದ ವೈಯಕ್ತಿಕ ಆರೋಗ್ಯವೃದ್ಧಿಯಾಗುವುದಲ್ಲದೆ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೂ ಪೂರಕವಾಗಲಿದೆ. ಹೀಗಾಗಿ ಎಲ್ಲರೂ ಯೋಗಾಭ್ಯಾಸವನ್ನು ಪ್ರತಿ ದಿನ ಕುಟುಂಬ ಸಮೇತ ಕೆಲವು ಗಂಟೆ ಯೋಗಭ್ಯಾಕ್ಕೆ ನೀಡಲು ಮುಂದಾಗಬೇಕು ಎಂದರು.
ಬ್ರಹ್ಮ ಕುಮಾರಿ ಸಾವಿತ್ರಿ ಅಕ್ಕ ಯೋಗ ಶಿಬಿರ ನಡೆಸಿ,ಯೋಗವು ಪ್ರಾಚೀನ ಭಾರತದ ಅಮೂಲ್ಯ ಕೊಡುಗೆಯಾಗಿದೆ. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವಲ್ಲಿ ಯೋಗದ ಪಾತ್ರ ಮಹತ್ವದ್ದು. ಪ್ರತಿವರ್ಷ ಒಂದೊAದು ಥೀಮ್‌ನಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಥೀಮ್ ಆಗಿದೆ. ಹಾಗಾಗಿ ಯೋಗದಿಂದ ಆರೋಗ್ಯ, ಪ್ರಾಣಾಯಾಮದಿಂದ ಮನಶಾಂತಿ, ಜ್ಞಾನದಿಂದ ಜೀವನದ ಸಾರ್ಥಕತೆ ದೊರೆಯುತ್ತದೆ. ಯೋಗವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಪಡೆಯಲು ಪ್ರತಿಯೊಬ್ಬರು ಸಂಕಲ್ಪ ತೋರಬೇಕು ಎಂದರು.


ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಅದು ದೇಹ, ಮನಸ್ಸು, ಆತ್ಮ ಮತ್ತು ಚೇತನದ ಸಮನ್ವಯ ಸಾಧಿಸುವ ಜೀವನ ವಿಧಾನವಾಗಿದೆ. ಯೋಗಾಸನಗಳು ದೇಹವನ್ನು ಆರೋಗ್ಯವಂತ ಹಾಗೂ ಬಲಿಷ್ಠವಾಗಿಸಿದರೆ, ಪ್ರಾಣಾಯಾಮ ಮನಸ್ಸಿಗೆ ಶಾಂತಿ ಮತ್ತು ಸ್ಥಿರತೆಯನ್ನು ನೀಡುತ್ತದೆ. ಧ್ಯಾನವು ಆತ್ಮಜ್ಞಾನವನ್ನು ಬೆಳೆಸಿ ಚೇತನವನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಸಹಕಾರಿಯಾಗಿವೆ ಎಂದರು.
ಇದೇ ವೇಳೆ ಯೋಗದಲ್ಲಿ ಪಾಲ್ಗೊಂಡಿದ್ದವರಿಗೆ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಹೆಸರಿನಲ್ಲಿ ಸಂಕಲ್ಪ ಭೋಧಿಸಿದರು.


ಅಂಚೆ ಕಚೇರಿಗಳಲ್ಲಿ ಯೋಗ ಶಿಬಿರಗಳು, ಪರಿಸರ ದಿನಾಚರಣೆ, ಜನರಲ್ಲಿ ಜಾಗೃತಿ ವಿವಿಧ ಪ್ರದರ್ಶನಗಳು ಮತ್ತು ಅರಿವು ಮೂಡಿಸುವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವದು ಸಂತಸ ತಂದಿದೆ ಎಂದರು.
ಉಪ ಅಂಚೆ ಪಾಲಕರಾದ ಡಿ.ಜಿ.ಮ್ಯಾಗೇರಿ, ಬ್ರಹ್ಮಕುಮಾರಿ ಬಿ.ಕೆ.ಮಮತಾ ಅಕ್ಕ, ಶ್ರೀಮತಿ ಶೋಭಾ ಬೆಂಗಳೂರ ಹಾಗೂ ವಿವಿಧ ಅಂಚೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ವೆಂಕಟೇಶ ಆಕಳವಾಡಿ ನಿರೂಪಿಸಿ, ವಂದಿಸಿದರು.