Home ಜಿಲ್ಲೆ ಯಾದಗಿರಿ ಡಿಸಿಸಿ ಬ್ಯಾಂಕ್ ಹೊಸ ಕಟ್ಟಡಕ್ಕೆ ಭೂಮಿ ಪೂಜೆ

ಯಾದಗಿರಿ ಡಿಸಿಸಿ ಬ್ಯಾಂಕ್ ಹೊಸ ಕಟ್ಟಡಕ್ಕೆ ಭೂಮಿ ಪೂಜೆ

ಯಾದಗಿರಿ : ಮೇ.೨೭:ನಗರದ ಎಪಿಎಂಸಿ ಆವರಣದಲ್ಲಿ ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ, ಕಲ್ಬುರ್ಗಿ ಇದರ ಯಾದಗಿರಿ ಶಾಖೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಸಚಿವ ಶರಣಬಸಪ್ಪ ದರ್ಶನಾಪುರ ಅವರು ನೆರವೇರಿಸಿದರು. ಇದೇ ವೇಳೆ ಮಾತನಾಡಿದ ಅವರು, ಸಹಕಾರ ಕ್ಷೇತ್ರವು ರೈತರು ಹಾಗೂ ಗ್ರಾಮೀಣ ಜನರ ಆರ್ಥಿಕ ಬಲವರ್ಧನೆಗೆ ಪ್ರಮುಖ ಆಧಾರವಾಗಿದ್ದು, ಡಿಸಿಸಿ ಬ್ಯಾಂಕ್ ಹೊಸ ಕಟ್ಟಡದಿಂದ ಸಾರ್ವಜನಿಕರಿಗೆ ಇನ್ನಷ್ಟು ಸುಲಭ ಮತ್ತು ಸಮರ್ಪಕ ಬ್ಯಾಂಕಿAಗ್ ಸೇವೆಗಳು ಲಭ್ಯವಾಗಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಹಾಗೂ ಶರಣಗೌಡ ಕಂದಕೂರ ಭಾಗವಹಿಸಿದ್ದರು.

ಸಭೆಯ ಅಧ್ಯಕ್ಷತೆಯನ್ನು ವಿಠಲ ಯಾದವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಂಕರ ಭೋಪಾಲ ಪಾಟೀಲ ಮತ್ತು ಸಿದ್ದರಾಮ್ ರೆಡ್ಡಿ ಕೌಳೂರು. ಉಪಸ್ಥಿತರಿದ್ದರು.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾಜಿ ಉಪಾಧ್ಯಕ್ಷರು ಹಾಗೂ ನಿರ್ದೇಶಕರಾದ ಸುರೇಶ ಸಜ್ಜನ್ , ನಿರ್ದೇಶಕರಾದ ಬಸವರಾಜ ಪಾಟೀಲ ಚಿಂಚೋಳಿ, ಯಾದಗಿರಿ ಜಿಲ್ಲೆಯ ಉಪನಿಬಂಧಕರಾದ ಆರ್.ಪವನಕುಮಾರ , ಡಿಸಿಸಿ ಬ್ಯಾಂಕ್ ನೋಡಲ್ ಅಧಿಕಾರಿ ಚನ್ನಾರೆಡ್ಡಿ ಕರಡಕಲ್, ಯಾದಗಿರಿ ಶಾಖಾ ವ್ಯವಸ್ಥಾಪಕರಾದ ಮಧ್ವರಾಜ್, ತಾಲೂಕು ಶಾಖಾ ನಿರೀಕ್ಷಕರಾದ ಶಿವರಾಜ್ ಪಾಟೀಲ್, ಸಂತೋಷ್ ಕುಮಾರ್, ಸಹಕಾರ ವಿಸ್ತೀರ್ಣ ಅಧಿಕಾರಿ ಪ್ರಶಾಂತ್ ಕುಮಾರ್ ಚಿನ್ನಾಕರ್ ಸೇರಿದಂತೆ ಸಹಕಾರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಸಹಕಾರ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.