
ಕೋಲಾರ, ಜೂ,೨೫-ಜಿಲ್ಲೆಯಲ್ಲಿ ಮುಂಬರುವ ಎಸ್‌ಐಆರ್ ಗಣತಿ ಕಾರ್ಯವನ್ನು ಅತ್ಯಂತ ನಿಖರವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಾನ್ಯ ಅಪರ ಜಿಲ್ಲಾಧಿಕಾರಿ ಎಸ್ ಎಂ ಮಂಗಳ ಅವರು ಪೂರ್ವಭಾವಿ ಸಿದ್ಧತಾ ಕಾರ್ಯದಲ್ಲಿ ಭಾಗಿಯಾದರು.
ಜಿಲ್ಲಾ ಮಟ್ಟದ ನಿಯೋಜಿತ ಅಧಿಕಾರಿಗಳ ಉಸ್ತುವಾರಿಯಲ್ಲಿ, ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಹಾಗೂ ಹೋಬಳಿಗಳಿಗೆ ಅಗತ್ಯವಿರುವ ಗಣತಿ ನಮೂನೆಗಳನ್ನು ವರ್ಗೀಕರಿಸಿ, ಆಯಾ ಭಾಗದ ನಿಯೋಜಿತ ಅಧಿಕಾರಿಗಳಿಗೆ ವಿತರಿಸಲಾಯಿತು.
ಗಣತಿ ಕಾರ್ಯವು ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ನಡೆಯಲು ಈ ವ್ಯವಸ್ಥಿತ ವಿತರಣಾ ಪ್ರಕ್ರಿಯೆಯು ಸಹಕಾರಿಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಎಸ್ ಎಂ ಮಂಗಳ ತಿಳಿಸಿದ್ದಾರೆ.























