Home ಜಿಲ್ಲೆ ಶ್ರೀ ಮೋಹನದಾಸರ ಆರಾಧನೆ

ಶ್ರೀ ಮೋಹನದಾಸರ ಆರಾಧನೆ

ಹುಬ್ಬಳ್ಳಿ, ಜೂ೧೪: ಅಪರೋಕ್ಷ ಜ್ಞಾನಿಗಳು, ಚಂದ್ರಾAಶ ಸಂಭೂತರಾದ ಶ್ರೀ ಮೋಹನದಾಸರ ಮೂರು ದಿನಗಳ ಆರಾಧನಾ ಮಹೋತ್ಸವ ಜೂನ್ ೧೯ ರಿಂದ ೨೧ ರ ವರೆಗೆ ಗುಂತಕಲ್ ಬಳಿಯ ಚಿಪ್ಪಗಿರಿಯ ಶ್ರೀ ವಿಜಯದಾಸರ ಕಟ್ಟೆಯಲ್ಲಿ ಜರುಗಲಿದೆ.


ಹುಬ್ಬಳ್ಳಿ-ಧಾರವಾಡ ಶ್ರೀ ವಿಜಯದಾಸರ ಭಕ್ತ ವೃಂದದವರು ಚಿಪ್ಪಗಿರಿಯ ಮೋಹನದಾಸರ ವಂಶಸ್ಥರ ನೇತೃತ್ವದಲ್ಲಿ ೪೯ ನೇ ವರ್ಷದ ಈ ಆರಾಧನೆಯನ್ನು ವಿಜ್ರಂಭಣೆಯಿAದ ಆಚರಿಸಲುನಿರ್ಧರಿಸಿದೆ.
ಮೂರು ದಿನಗಳ ಕಾಲ ಪಂಡಿತರಿAದ ಜ್ಞಾನಸತ್ರ, ಅಲಂಕಾರ,ಸAಗೀತ ಸೇವೆ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೂಡಲಿ ಅಕ್ಷೋಭ್ಯ ಮಠದ
ಶ್ರೀ ರಘುವಿಜಯತೀರ್ಥ ಶ್ರೀಪಾದಂಗಳವರು ಮಧ್ಯಾರಾಧನೆಯಂದು ಚಿಪ್ಪಗಿರಿಯಲ್ಲಿ ಉಪಸ್ಥಿತರಿದ್ದು ಸಂಸ್ಥಾನ ಪೂಜೆ ನೆರವೇರಿಸಲಿದ್ದಾರೆ.

ಭಗವದ್ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ವಿಜಯದಾಸರು ಹಾಗೂ ಶ್ರೀ ಮೋಹನದಾಸರ ಅನುಗ್ರಹಕ್ಕೆ ಪಾತ್ರರಾಗಲು ಭಕ್ತವೃಂದದ ವತಿಯಿಂದ ಶ್ರೀ ರಾಮಚಂದ್ರ ಗುಣಾರಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಉದಯ ಕುಲಕರ್ಣಿ -೯೬೬೩೮೬೦೪೪೯, ಆರ್.ಜಿ.ಗುಣಾರಿ -೯೬೩೨೪೬೧೪೮೯ ಹಾಗೂ ಮೋಹನದಾಸ ಬಾಳಂಬಿಡ-೯೦೦೮೪೮೮೯೧೦ ಅವರನ್ನು ಸಂಪರ್ಕಿಸಬಹುದು.