
ಬೀದರ:ಮೇ.4:ಪಾಪನಾಶ ನಗೆ ಯೋಗ ಕೂಟದ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ ನಗರದ ಬರೀದ್ ಶಾಹಿ ಉದ್ಯಾನವನದಲ್ಲಿ ವಿಶ್ವ ನಗೆ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ಗಂಗಾಂಬಿಕಾ ಅಕ್ಕ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿಗೆ ನೀರರೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಗು ಎನ್ನುವುದು ದೇವರು ಮನುಷ್ಯರಿಗೆ ನೀಡಿದ ಅಮೂಲ್ಯವಾದ ವರ. ಮನಸ್ಸು ಬಿಚ್ಚಿ ಮಾತನಾಡುವುದು ಮತ್ತು ನಗು ಆರೋಗ್ಯಕರ ಜೀವನಕ್ಕೆ ಅತ್ಯಾವಶ್ಯಕ,” ಎಂದು ಹೇಳಿದರು.
ಒಳಗೆ ಒಂದು, ಹೊರಗೆ ಒಂದು ರೀತಿಯಲ್ಲಿ ಬದುಕುವವರು ನಿಜವಾದ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ. ನಗು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಸಮತೋಲನ ಕಾಪಾಡುತ್ತದೆ,” ಎಂದು ಅವರು ತಿಳಿಸಿದರು.
ಅವರು ಇನ್ನೂ ಹೇಳುವಂತೆ, ಶರಣರು ಅನಾದಿಕಾಲದಿಂದ ಜನರನ್ನು ನಗಿಸುವ ಕಾಯಕವನ್ನು ಪೆÇ್ರೀತ್ಸಾಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಲೆಯನ್ನು ಕಾಯಕ ಮಾಡಿಕೊಂಡು ಹಲವರು ಸಮಾಜಕ್ಕೆ ಹಾಸ್ಯ ಮೂಲಕ ಸಂತೋಷ ಹಂಚುತ್ತಿದ್ದಾರೆ ಎಂದರು. ಹಿರಿಯರ ಅನುಭವ ಸಮಾಜಕ್ಕೆ ಅಮೂಲ್ಯವಾಗಿದ್ದು, ಅವರನ್ನು ಗೌರವಿಸಿ ಕಾಪಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ನಂತರ ಮಾತನಾಡಿದ ಅಮರ್ನಾಥ್ ಸೋಲಾಪುರ್ ಅವರು, ನಗುವಿನಿಂದ ಆರೋಗ್ಯದ ಮೇಲೆ ಆಗುವ ಸಕಾರಾತ್ಮಕ ಪರಿಣಾಮಗಳನ್ನು ವಿವರಿಸಿದರು. 71 ವರ್ಷ ಮೇಲ್ಪಟ್ಟವರಲ್ಲಿ 61% ಜನರು ಹೈಪರ್ ಟೆನ್ಶನ್, 24% ಡಯಾಬಿಟಿಸ್, 10-12% ಸಿ.ಒ.ಪಿ.ಡಿ. ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವುದಾಗಿ ತಿಳಿಸಿದರು. ಈ ಎಲ್ಲ ಕಾಯಿಲೆಗಳಿಗೆ ಮಾನಸಿಕ ಒತ್ತಡ ಪ್ರಮುಖ ಕಾರಣವಾಗಿದ್ದು, ನಗು ಅದನ್ನು ಕಡಿಮೆ ಮಾಡಲು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯರು ವಿವಿಧ ಹಾಸ್ಯ ಪ್ರಸಂಗಗಳು ಮತ್ತು ಜೋಕ್ಸ್‍ಗಳನ್ನು ಹೇಳಿ ಎಲ್ಲರನ್ನು ಮನರಂಜಿಸಿದರು.
ಈ ಸಂದರ್ಭದಲ್ಲಿ “ಅಕ್ಕ ಮಹಾದೇವಿ ಮಹಿಳಾ ನಗೆ ಯೋಗ ಕೂಟ”ವನ್ನು ಡಾ. ಗಂಗಾಂಬಿಕಾ ಅಕ್ಕ ಅವರು ಉದ್ಘಾಟಿಸಿದರು. ಸಂಘದ ಪದಾಧಿಕಾರಿಗಳಾಗಿ ಸನ್ಮಾನಿಸಿದರು ಅಧ್ಯಕ್ಷರು: ಶರಣ ಸರಸ್ವತಿ ಬೆಳ್ಳಾ, ಉಪಾಧ್ಯಕ್ಷರು: ಶರಣೆ ನೀಲಮ್ಮ ರಂಗೂನ್, ಕಾರ್ಯದರ್ಶಿ: ಶರಣೆ ಪುಣ್ಯವತಿ ವಿಸಾಜಿ, ಖಜಾಂಚಿ: ಶರಣೆ ವಿಜಯಲಕ್ಷ್ಮಿ ಪಾಟೀಲ್, ಹಾಗೂ ಇತರ ಶರಣಿಯರು ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿದ್ದಯ್ಯ ಕವಡಿಮಠ, ಗಂಗಪ್ಪ ಸಾವಳ, ಶಂಕರ್ ರಾವ್ ಚಿದರಿ, ಅಶೋಕ್ ಕುಮಾರ್ ಕಾರಂಜಿ, ಸುನಿಲ್ ಗಂಗಾಶ್ರೀ, ಯೋಗೇಂದ್ರ ಯದ್ಲಾಪುರೇ, ಎಸ್ ಬಿ ಬಿರಾದರ್, ದೇಶಪ್ಪ ಬೋರುಗುಡ್ಡೆ, ಪಂಚಾಕ್ಷರಿ ಮಲ್ಲಿಕಾರ್ಜುನ, ಅಶೋಕ್ ಶಾಲಕ್ಕೆ, ಶಿವರಾಜ್ ಬುಕ್ಕ, ಸೇರಿದಂತೆ ಹಲವರು ಉಪಸ್ಥಿತರಿದ್ದರು.






















