
ತಾಳಿಕೋಟೆ:ಮೇ.೩: ವೈದಿಕ ಸಂಸ್ಕಾರ ಶಿಬಿರಗಳು ಸಾಮಾನ್ಯವಾಗಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕöÈತಿ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಬೇಸಿಗೆ ಶಿಬಿರಗಳಾಗಿವೆ ಈ ಶಿಬಿರದಿಂದ ಮೌಲ್ಯಯುತವಾದ ಬಧುಕು ರೂಪಿಸಿಕೊಳ್ಳಲು ಸಾದ್ಯವಾಗಲಿದೆ ಎಂದು ತುಂಬಗಿ-ಸಾಸನೂರ ಹಿರೇಮಠದ ಶ್ರೀ ಮಹಾಂತಲಿAಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಚಬನೂರ ಗ್ರಾಮದ ಪ್ರತಿಷ್ಠಿತ ದಾಸೋಹ ಮಠವಾಗಿರುವ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದಲ್ಲಿ ಶ್ರೀ ಮಠದ ಧರ್ಮಾಧಿಕಾರಿ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಮೇ.೧ ರಿಂದ ೩೦ ರವರೆಗೆ ಒಂದು ತಿಂಗಳ ರ‍್ಯಂತ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ವೈದಿಕ ಸಂಸ್ಕಾರ ಶಿಬಿರದ ಪ್ರಾರಂಭೊತ್ಸವ ಸಮಾರಂಭವನ್ನು ಉದ್ಘಾಟಿಸಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ವಿಜಯಪುರ ಜಿಲ್ಲೆಯಲ್ಲಿ ಪ್ರಥಮಭಾರಿಗೆ ಚಬನೂರ ಗ್ರಾಮದ ಸಿದ್ದಿ ಪುರುಷ ಶ್ರೀರಾಮಲಿಂಗೇಶ್ವರ ಮಠದಲ್ಲಿ ನಡೆಯುತ್ತಿರುವ ವೈದಿಕ ಸಂಸ್ಕಾರ ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಈ ಶಿಬಿರದಲ್ಲಿ ಮಕ್ಕಳಿಗೆ ಇಷ್ಟಲಿಂಗ ಪೂಜೆ, ಶಿವಯೋಗ ಸಾಧನೆ ಮತ್ತು ಪೂಜಾ ವಿಧಿವಿಧಾನಗಳನ್ನು ಕಲಿಸಲಾಗುತ್ತದೆ ವೈದಿಕ ಸಂಸ್ಕಾರ, ಧಾರ್ಮಿಕ ಆಚರಣೆಗಳು ಮತ್ತು ಇಷ್ಟಲಿಂಗ ಪೂಜೆಯ ಬಗ್ಗೆ ಜ್ಞಾನ ನೀಡುವುದು, ವೇದ, ಪಠಣ, ಯೋಗ, ಒಳಗೊಂಡು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಬಲಪಡಿಸಲು ಅವಶ್ಯವಾಗಿರುವ ಅಂಶಗಳು ಈ ಶಿಬಿರದಲ್ಲಿ ಕಲಿಸಲಾಗುತ್ತಿದೆ ಶ್ರೀ ಮಠದ ಧರ್ಮಾಧಿಕಾರಿ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಮಕ್ಕಳಲ್ಲಿ ಸಂಸ್ಕಾರದ ಜ್ಞಾನ ಅರಿವು ಮುಡಿಸುವ ಸಲುವಾಗಿ ವೈದಿಕ ಸಂಸ್ಕಾರ ಶಿಬಿರವನ್ನು ಆಯೋಜಿಸಿರುವದು ಶ್ಲಾಘನೀಯವಾಗಿದೆ ಇಂತಹ ಕಾರ್ಯಗಳಿಗೆ ಎಲ್ಲ ಮಠಮಾನ್ಯಗಳು ಮುಂದಾದರೆ ಸಮಾಜವನ್ನು ಸರಿದಾರಿಗೆ ಕೊಂಡೊಯಲು ಸಹಕಾರಿಯಾಗಲಿದೆ ಎಂದರು.
ಈ ಶಿಬರದ ನೇತೃತ್ವವಹಿಸಿದ ಶ್ರೀ ಮಠದ ಧರ್ಮಾಧಿಕಾರಿ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರವೆAಬುದು ಮರೆತು ಹೋಗುತ್ತಿದೆ ಕೆಲವು ಪಾಲಕರು ಕೇವಲ ಶಿಕ್ಷಣಕೊಡಿಸುವ ಬರದಲ್ಲಿ ಮಕ್ಕಳಲ್ಲಿ ನಡೆ ನುಡಿ ಸಂಸ್ಕಾರವೆAಬುದನ್ನು ಕಲಿಸುವದನ್ನು ಮರೆತು ಹೋಗಿದ್ದಾರೆ ಹೀಗಾಗಿ ಈ ಭಾಗದ ಮಕ್ಕಳಲ್ಲಿ ೧ ತಿಂಗಳ ಶಾಲಾ ರಜೆಯ ಸಂದರ್ಬದಲ್ಲಿ ಮಕ್ಕಳಿಗೆ ಉಪಯುಕ್ತವಾಗುವ ಜಿಲ್ಲೆಯಲ್ಲಿಯೇ ಮಾದರಿಯಾಗುವ ವೈದಿಕ ಸಂಸ್ಕಾರ ಶಿಬಿರವನ್ನು ಆಯೋಜಿಸಿ ಕಾಶಿಯ ವೇದ ಪಂಡಿತರಿAದ ಹಾಗೂ ಶ್ರೀಶೈಲ ವೇದ ಮತ್ತು ಜ್ಯೋತಿಷ್ಯ ಪಂಡಿತರಿAದ ವಾರಕ್ಕೊಮ್ಮೆ ವಿಶೇಷ ಭೋದನಾ ಶಿಬಿರ ನಡೆಯಲಿದೆ ದಿನನಿತ್ಯ ಕುಂಟೋಜಿಯ ವೈದಿಕ ಶಾಸ್ತಿçÃಗಳಾದ ವೇ.ವಿರೇಶ ಹಿರೇಮಠ, ವೈದಿಕ ಶಾಸ್ತಿçÃಗಳಾದ ವೇ.ಪ್ರದೀಪ ಹಿರೇಮಠ, ವೇ.ಗಿರಿಶ ಹಿರೇಮಠ ಅವರು ನಡೆಸಿಕೊಡಲಿದ್ದಾರೆ. ಒಂದು ತಿಂಗಳ ರ‍್ಯಂತ ನಡೆಯಲಿರುವ ವೈದಿಕ ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ನಿತ್ಯ ದಾಸೋಹದ ಪ್ರಸಾದದ ಜೊತೆಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಈ ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳು ಮೌಲ್ಯಯುತವಾದ ಬಧುಕಿನ ದಾರಿಯಲ್ಲಿ ಸಾಗಲಿದ್ದಾರೆಂದರು.
ಈ ಸಮಯದಲ್ಲಿ ಶಿಬಿರಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
ಮಕ್ಕಳು ಕೇವಲ ಅಕ್ಷರ ಕಲಿತರೆ ಸಾಲದು ಬಧುಕಿನ ದಾರಿ ತಿಳಿಸುವ ತಂದೆ ತಾಯಿಯನ್ನು ಗೌರವದಿಂದ ಪೂಜ್ಯಭಾವನೆಯಿಂದ ಕಾಣುವ ಸಂಸ್ಕಾರವೆAಬುದು ಭವು ಮುಖ್ಯವಾಗಿ ಕಲಿಸಬೇಕಾಗುತ್ತದೆ ಈ ಕಾರಣದಿಂದಲೇ ಮಕ್ಕಳಿಗಾಗಿಯೇ ವೈದಿಕ ಸಂಸ್ಕಾರ ಶಿಬಿರವನ್ನು ಶ್ರೀಮಠದ ವತಿಯಿಂದ ಆಯೋಜಿಸಿದ್ದೇವೆ.
ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು






















