
ಕಲಬುರಗಿ,ಜೂ.24-ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೆಡ್‍ಕಾನ್ಸಸ್ಟೇಬಲ್ ಒಬ್ಬರು ಮೃತಪಟ್ಟಿರುವ ಘಟನೆ ಸಂಚಾರಿ ಪೊಲೀಸ್ ಠಾಣೆ-2ರ ವ್ಯಾಪ್ತಿಯ ಕಗ್ಗನಮಡಿ ಕ್ರಾಸ್ ಹತ್ತಿರ ನಡೆದಿದೆ.
ರಟಕಲ್ ಪೊಲೀಸ್ ಠಾಣೆಯಲ್ಲಿ ಹೆಡ್‍ಕಾನ್ಸಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಲಬುರಗಿಯ ಶಕ್ತಿ ನಗರ ನಿವಾಸಿ ದಶರಥ ವಾಘ್ಮೋರೆ ಮತಪಟ್ಟವರು.
ಇವರು ಮಹಾಗಾಂವದಿಂದ ಬೈಕ್ ಮೇಲೆ ಕಲಬುರಗಿ ಕಡೆಗೆ ಬರುತ್ತಿದ್ದಾಗ ಕಲಬುರಗಿಯಿಂದ ಹುಮನಾಬಾದ ಕಡೆಗೆ ಹೋಗುತ್ತಿದ್ದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮೃತರ ಪತ್ನಿ ಶುಭಮಂಗಲ ವಾಘ್ಮೋರೆ ಅವರು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.


























