Home ಕ್ರೈಂ ಸುದ್ದಿಗಳು ರಥದ ಚಕ್ರಕ್ಕೆ ಸಿಲುಕಿ ಇಬ್ಬರಿಗೆ ಗಂಭೀರ ಗಾಯ

ರಥದ ಚಕ್ರಕ್ಕೆ ಸಿಲುಕಿ ಇಬ್ಬರಿಗೆ ಗಂಭೀರ ಗಾಯ

ಬಸವಕಲ್ಯಾಣ,ಏ.23: ಬಸವೇಶ್ವರ ರಥೋತ್ಸವ ಸಂದರ್ಭದಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಧನ್ನರಾಜ ಚಾಕುರೆ ( 67) , ರಿಷಬ್ ಶಿವಾನಂದ (29) ಗಾಯಗೊಂಡವರು.ಧನರಾಜ್ ಚಾಕುರೆ ಎಂಬುವವರು ಎರಡು ಕಾಲು ಕಳೆದುಕೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಇವರು ಮೂಲತಃ ಮುಚಳಂಬ ಗ್ರಾಮದ ನಿವಾಸಿ.
ಇನ್ನೊಬ್ಬ ವ್ಯಕ್ತಿ ರಿಷಬ್ ಶಿವಾನಂದ ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿ ಒಂದು ಕಾಲು ಕತ್ತರಿಸಿದೆ.ಇವರನ್ನು ಸೋಲಾಪುರ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಇವರು ಬಸವಕಲ್ಯಾಣ ಕಾಳಿಗಲ್ಲಿ ನಿವಾಸಿ .ಇಬ್ಬರ ಆರೋಗ್ಯ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.