
ಕಲಬುರಗಿ,ಏ.23-ನಮಗೆ ಮಾನಸಿಕವಾಗಿ ನೋವಾದಾಗ ಸಂಗೀತವನ್ನು ಆಲಿಸಿದರೆ ಮನಸ್ಸಿನ ನೋವೆಲ್ಲಾ ಮಾಯವಾಗಿ ನೆಮ್ಮದಿ ಸಿಗುತ್ತದೆ ಎಂದು ಖ್ಯಾತ ಸಂಗೀತಗಾರÀ ಪೆÇ್ರಫೆಸರ್ ರೇವಯ್ಯ ವಸ್ತ್ರದಮಠ ಹೇಳಿದರು.
ರವಿವರ್ಮ ಕಲಾ ಸಾಹಿತ್ಯ ಸಾಂಸ್ಕøತಿಕ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಲಾ ಮಹೋತ್ಸವ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಎಲೆಮರೆಯ ಕಾಯಂತೆ ಇರುವ ಗ್ರಾಮೀಣ ಕಲಾವಿದರನ್ನು ಈ ಸ್ವಯಂ ಸಂಸ್ಥೆಯು ಗುರುತಿಸಿ ಮತ್ತು ಗೌರವಿಸುತ್ತಿರುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ ಜಿಲ್ಲಾಮಟ್ಟದ ಕಾಯಕ ರತ್ನ ಪ್ರಶಸ್ತಿ ನೀಡಿ ಕಲಾವಿದರಿಗೆ ಸತ್ಕರಿಸುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಭಿಷೇಕ ಅಲ್ಲಂಪ್ರಭು ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೆಲ್ಫೇರ್ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಲ್ಯಾಣಕುಮಾರ್ ಶೀಲವಂತ, ಕರ್ನಾಟಕ ಸಂಘಟನಾ ವೇದಿಕೆ ರಾಜ್ಯ ಅಧ್ಯಕ್ಷ ಗುರುಬಂಡಿ, ರವಿವರ್ಮ ಸಂಸ್ಥೆಯ ಕಾರ್ಯದರ್ಶಿ ಶಿವಶಂಕರ್ ಬಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಬಿ. ನಿಂಗಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಭಾಜನರಾದ ಭುವನೇಶ್ವರಿ ಚಿಮ್ಕೋಡ್, ಪೆÇ.್ರ ಶೋಭಾದೇವಿ ಚಕ್ಕಿ, ಡಾ.ಪದ್ಮಾವತಿ ಧನ್ನಿ, ರಾಜಕುಮಾರ್, ಶ್ರೀದೇವಿ, ಕುಮಾರಿ ರಾಜೇಶ್ವರಿ ಸಾಹು, ಜಗನ್ನಾಥ್ ಬಿ.ಸೇಗಜಿ, ಡಾ.ಕೆ.ಗಿರಿಮಲ್, ಡಾ.ಕೆ. ಮಂಜುನಾಥ್ ಕುಲಕರ್ಣಿ, ಇನ್ ಗುಲ್ಬರ್ಗ ಚಾನೆಲನ ಬಾದಷಾ ಎಸ್ ಅಲ್ದಿ, ಸುಧಾ ಮದನ್ಕರ, ಪ್ರೀತಿ ಅಕ್ಕೋಣಿ ಉಪಸ್ಥಿತರಿದ್ದರು. ಸೂರ್ಯಕಾಂತ್ ಅವರಾದ, ಮಾಂತಪ್ಪ ಎಸ್ ಮಂದೆವಾಲ, ದೇವೇಂದ್ರಪ್ಪ ಚಿಂಚನಸೂರ್, ಬಲಭೀಮ್ ನೆಲಗಿ, ಚೇತನ್ ಅವರು ಸುಗಮ ಸಂಗೀತ, ತತ್ವಪದ, ಜಾನಪದ ಹಾಡುಗಳನ್ನು ಹಾಡಿ ಎಲ್ಲರ ಗಮನ ಸೆಳೆದರು. ಕೊನೆಯದಾಗಿ ಡಾ.ಮಾರುತಿ ಬೇಂದ್ರೆ ಅವರು ನಿರೂಪಿಸಿ ವಂದಿಸಿದರು.






















