Home ಜಿಲ್ಲೆ ಕಲಬುರಗಿ ಜೇವರ್ಗಿ: ಉದ್ಯೋಗ ನೇಮಕಾತಿ ಅಭಿಯಾನ

ಜೇವರ್ಗಿ: ಉದ್ಯೋಗ ನೇಮಕಾತಿ ಅಭಿಯಾನ

ಜೇವರ್ಗಿ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಿಕ ಗುಣಮಟ್ಟ ಭರವಸೆ ಕೋಶ, ಉದ್ಯೋಗ ಕೋಶ ಹಾಗೂ ಬೆಂಗಳೂರಿನ ಎಮಿನೆಂಟ್ ಹೆಚ್ ಆರ್ ಸಾಲ್ಯುಶನ್ಸ್ ಪ್ರೈವೇಟ್ ಲಿಮಿಟೆಡ್ ಇವುಗಳ ಸಹಯೋಗದಲ್ಲಿ ಆಯೋಜಿಸಲಾದ ವಿದ್ಯಾರ್ಥಿಗಳಿಗಾಗಿ ಉದ್ಯೋಗ ನೇಮಕಾತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಅಭಿಯಾನ ಕುರಿತು ನೇಮಕಾತಿ ವ್ಯವಸ್ಥಾಪಕ ಮಹೇಶ ಬಿರಾದಾರ ಮಾತನಾಡಿ, ನೇಮಕಾತಿಯ ಕ್ರಮ, ಪ್ರಯೋಜನ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಶಾಂತಾ ಅಸ್ಟಿಗೆ ಮಾತನಾಡಿ, ಉದ್ಯೋಗ ಹುಡುಕುವವರಿಗೆ ಇದು ಸುವರ್ಣಾವಕಾಶ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕಿ ಡಾ. ರಾಬಿಯಾಬೇಗಂ, ಸಿಬ್ಬಂದಿ ಕಾರ್ಯದರ್ಶಿ ಡಾ. ಖಾಜಾವಲಿ ಈಚನಾಳ, ಐಕ್ಯುಏಸಿ ಸಂಯೋಜಕ ಡಾ. ಸಂದೀಪ್ ತಿವಾರಿ, ನಾಗರಾಜ ವೇದಿಕೆ ಮೇಲಿದ್ದರು. ಡಾ. ರೂಪಾ ಕುಲಕರ್ಣಿ, ಡಾ. ರಾಮುಲು, ಡಾ. ಶಿವಕುಮಾರ, ಡಾ. ಅಪರ್ಣಾ ಉಪಸ್ಥಿತರಿದ್ದರು.
ಐಕ್ಯುಏಸಿ ಸಹ ಸಂಯೋಜಕ ಡಾ. ರವೀಂದ್ರ ನಿರೂಪಿಸಿದರೆ, ಡಾ. ಹೊನ್ನೂರಸ್ವಾಮಿ ಸ್ವಾಗತಿಸಿದರು. ಡಾ. ಮೋಹನ್ ಬೆ?ಲಪತ್ತಾರ ವಂದಿಸಿದರು.
ಕಾರ್ಯಕ್ರಮದ ನಂತರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಯಿತು. ಬಿಎ, ಬಿ.ಕಾಂ, ಬಿಬಿಎ, ಬಿ.ಎಸ್. ಸಿ ಕೋರ್ಸುಗಳ ಅಂತಿಮ ವರ್ಷದ 150 ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದರು. ಉತ್ತೀರ್ಣರಾದ ವಿದ್ಯಾರ್ಥಿಗಳಾದ ರೀನಾ, ರಾಘವೇಂದ್ರ, ನಂದಿನಿ, ಸ್ವಾತಿ, ರೇವಣಸಿದ್ದಪ್ಪ, ಅಭಿನವ, ಭಾಗ್ಯಶ್ರೀ, ಮೇಘನಾ ಅವರಿಗೆ ಸಾಂಕೇತಿಕವಾಗಿ ನೇಮಕಾತಿ ಆದೇಶ ಪತ್ರ ನೀಡಲಾಯಿತು.