
ಕಲಬುರಗಿ,ಏ.23-ಮನೆಗೊಂದು ಗ್ರಂಥಾಲಯ ಅನುಷ್ಠಾನಮಾಡಿ ಸಾರ್ವಜನಿಕರಿಗೆ ಪುಸ್ತಕ ಓದು ಹೆಚ್ಚಿಸುವ ವಿಶೇಷ ಕಾರ್ಯಕ್ರಮ ಎಂದು ಖ್ಯಾತ ಸಾಹಿತಿಗಳು ಡಾ. ಶೈಲಜಾ ಬಾಗೇವಾಡಿ ಹೇಳಿದರು.
ಕನ್ನಡ ಪುಸ್ತಕ ಪದಾಧಿಕಾರ ಹಾಗೂ ಜಿಲ್ಲಾ ಜಾಗೃತ್ ಸಮಿತಿ ನಗರದ ಕೋಟ್ನೂರ್ ಡಿ ಬಡಾವಣೆಯ ಪುಸ್ತಕ ಪ್ರೇಮಿ ಶಿಕ್ಷಕರಾದ ಚಂದ್ರಶೇಖರ್ ಕಟ್ಟಿಮನಿ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಉದ್ಘಾಟನೆ ಮಾಡಿ ಮಾತನಾಡಿದರು ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಒಳ್ಳೆಯ ಯೋಜನೆಯನ್ನು ಹಾಕಿಕೊಂಡು ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಇರುವ ಹಾಗೆ ಮಾಡುತ್ತಿರುವುದು ಶ್ಲಾಘನೀಯ ಇವತ್ತಿನ ವಿದ್ಯಾರ್ಥಿಗಳು ಮೊಬೈಲ್ ಕಡೆ ವಾಲಿರುವುದನ್ನು ಕಂಡು ಅವರನ್ನು ಪುಸ್ತಕ ಓದುವ ರುಚಿಯನ್ನು ಹೆಚ್ಚಿಸುವ ವಿಶೇಷ ಪ್ರಯತ್ನ ಪ್ರಾಧಿಕಾರದು ಎಂದು ಬಾಗೇವಾಡಿ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ರಾಜ್ಯ ಸದಸ್ಯರಾದ ಬಿ ಎಚ್ ನೀರಗುಡಿ ಅವರು ಮಾತನಾಡಿ ಪುಸ್ತಕ ಪ್ರಾಧಿಕಾರ ವಿಶೇಷ ಕಾರ್ಯಕ್ರಮಗಳ ಹಮ್ಮಿಕೊಳ್ಳೋದರ ಜೊತೆಗೆ ಈ ಭಾಗದ ಸಾಹಿತಿಗಳ ಸಂಪುಟಗಳನ್ನು ಹೊರ ತರುವುದು ಶಾಲಾ-ಕಾಲೇಜುಗಳಲ್ಲಿ ನನ್ನ ನೆಚ್ಚಿನ ಪುಸ್ತಕ , ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ಭಾಗದ ಶಾಲಾ ಕಾಲೇಜುಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುವುದು. ಮನೆಗಳಲ್ಲಿ ಗ್ರಂಥಾಲಯ ನಿರ್ಮಿಸುವ ರವರಿಂದ ಪುಸ್ತಕ ಓದುವ್ಯಾಸ ಇಮ್ಮಡಿ ಆಗುತ್ತದೆ ಮನುಷ್ಯರಿಗೆ ಜ್ಞಾನ ವೃದ್ಧಿ ಆಗುತ್ತೆ ಎಂದು ಹೇಳಿದರು.
ಮನೆಯಲ್ಲಿ ಗ್ರಂಥಾಲಯ ನಿರ್ಮಿಸಿದ ಶಿಕ್ಷಕ ಚಂದ್ರಶೇಖರ ಕಟ್ಟಿಮನಿ ಅವರು ಸಾಹಿತ್ಯದ ಸ್ಪರ್ಧಾ ಪರೀಕ್ಷೆಯ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಓದಲು ನೀಡುತ್ತಿದ್ದೇನೆ. ಇನ್ನು ದೊಡ್ಡದಾದ ಗ್ರಂಥಾಲಯ ಮನೆಯಲ್ಲಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದೇನೆ ಪುಸ್ತಕಗಳು ವಿದ್ಯಾರ್ಥಿಗಳಿಗೆ ಉಪಯೋವಾಗಲಿ ಎನ್ನುವ ಮನೋಭಾವನೆ ಹೊಂದಿದ್ದೇನೆ ಎಂದು ಹೇಳಿದರು.
ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರಾದ ಡಾ. ಶೋಭಾದೇವಿ ಚೆಕ್ಕಿ ಕಾರ್ಯಕ್ರಮ ನಿರ್ವಹಿಸಿ ಕಲ್ಬುರ್ಗಿ ನಗರದಲ್ಲಿ ಸಾವಿರ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಯುವ ಸಾಹಿತಿ ಚಾಮರಾಜ ದೊಡ್ಡಮನಿ ಜಾಗೃತ ಸಮಿತಿ ಸದಸ್ಯ ಡಾ.ಪರ್ವೀನ್ ಸುಲ್ತಾನಾ ಸೇರಿದಂತೆ ಮತ್ತಿತರರು ಇದ್ದರು.






















