
ಕಲಬುರಗಿ,ಅ.7-ನಗರದ ಚೌಡಾ ಲೇಔಟ್‍ನಲ್ಲಿ ಎರಡು ಮನೆಗಳ ಬೀಗ ಮುರಿದು 1.39 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಲಾಗಿದೆ.
ದೊಡ್ಡಪ್ಪ ತಳವಾರ ಎಂಬುವವರ ಮನೆ ಬೀಗ 16 ಸಾವಿರ ರೂ.ಮೌಲ್ಯದ 4 ಗ್ರಾಂ.ಬಂಗಾರದ ಓಲೆ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕಿವಿಯೋಲೆ, 30 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಉಂಗುರ, 21 ಸಾವಿರ ರೂ.ನಗದು ಮತ್ತು ಇವರ ಮನೆಯ ಪಕ್ಕದ ಸಿದ್ರಾಮ ಕ್ಷತ್ರಿಯ ಎಂಬುವವರ ಮನೆ ಬೀಗ ಮುರಿದು 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ತಾಳಿಸರ, 12 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಕಿವಿಯೋಲೆ, ನಗದು ಹಣ ಸೇರಿ 1.39 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಲಾಗಿದೆ.
ದೊಡ್ಡಪ್ಪ ತಳವಾರ ಅವರು ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.























