Home ಜಿಲ್ಲೆ ಕಲಬುರಗಿ ಕಮಲಾಕರ್ ಧನ್ನಿಗೆ ಸನ್ಮಾನ

ಕಮಲಾಕರ್ ಧನ್ನಿಗೆ ಸನ್ಮಾನ

ಕಲಬುರಗಿ,ಮೇ.೪-ಇತ್ತೀಚಿಗೆ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಂಡ ಎಕ್ಸ್ಪೋ ಕಾರ್ಯಕ್ರಮದಲ್ಲಿ ತಮಿಳುನಾಡಿನ ಪ್ರತಿಷ್ಠಿತ ಗ್ಯಾಬ್ರೀಲ್ ಇಂಡಿಯಾ ಲಿಮಿಟೆಡ್ ಸ್ಟಾಲ್ ಭೇಟಿ ನೀಡಿದ ಕಲಬುರಗಿ ಟು ವ್ಹಿಲ್ಲರ್ ಸಂಘದ ಜಿಲ್ಲಾಧ್ಯಕ್ಷ ಕಮಲಾಕರ್ ಧನ್ನಿ ಅವರನ್ನು ಗ್ಯಾಬ್ರೀಲ್ ಇಂಡಿಯಾ ಲಿಮಿಟೆಡ್ ಜನರಲ್ ಮ್ಯಾನೇಜರ್ ಎ.ಕೆ. ರಾಮಣ್ಣ ಮತ್ತು ಕಲಬುರಗಿ ಜಿಲ್ಲೆಯ ಡಿಸ್ಟಿಬ್ಯೂಟರ್ ದೇವರಾಜ ಡಿ.ಕೆ. ಅವರು ಸನ್ಮಾನಿಸಿ ಗೌರವಿಸಿದರು.
ಮುಂಬರುವ ದಿನಗಳಲ್ಲಿ ತಮಿಳುನಾಡಿನಲ್ಲಿರುವ ಗ್ಯಾಬ್ರೀಲ್ ಕಂಪನಿಗೆ ಕಲಬುರಗಿ ಜಿಲ್ಲೆಯಿಂದ ಸುಮಾರು ೨೦೦ ಕ್ಕೂ ಹೆಚ್ಚು ಮೆಕ್ಯಾನಿಕ್ ಪದಾಧಿಕಾರಿಗಳು ಭೇಟಿ ನೀಡಲು ನಿರ್ಧಾರ ಮಾಡಿದ್ದೇವೆ ಎಂದು ಕಮಲಾಕರ್ ಧನ್ನಿ ತಿಳಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಟು ವಿಲ್ಲರ್ ಪದಾಧಿಕಾರಿಗಳು ಹಾಜರಿದ್ದರು.