
ಚನ್ನಮ್ಮನ ಕಿತ್ತೂರು,ನ೫: ಗೋಸಾವಿ ಸಮಾಜದ ಇತಿಹಾಸ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕು ಎಂದು ಕರ್ನಾಟಕ ಗೋಸಾವಿ ಸಮಾಜದ ರಾಜ್ಯಾಧ್ಯಕ್ಷ ಸಂಜಯ ಗಿರಿ ಹೇಳಿದರು.
ಪಟ್ಟಣದ ಸಭಾಂಗಣದಲ್ಲಿ ಸಮಾಜದ ಸಂಘಟನೆ, ಅಭಿವೃದ್ಧಿ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿ ಸಮಾಜದ ಬಾಂಧವರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸಬೇಕು. ಸಂಘಟನೆಯ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಹಳಿಯಾಳದ ಸತ್ಯಜಿತ್ ಗಿರಿ ಮಾತನಾಡಿ ಶಿಕ್ಷಣ, ಸಾಮಾಜಿಕ ಜಾಗೃತಿ, ಯುವಕರಿಗೆ ಪ್ರೋತ್ಸಾಹ, ಬಡವರಿಗೆ ನೆರವು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂಘಟನೆಯ ಪ್ರಯೋಜನ ತಲುಪುವಂತೆ ಕಾರ್ಯನಿರ್ವಹಿಸಬೇಕು ಸಂಘಟನೆ ಮೂಲಕ ನಿರಂತರ ಜನಪರ ಕಾರ್ಯಗಳನ್ನು ಕೈಗೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಇದೆ ವೇಳೆ, ದತ್ತಾತ್ರೇಯ ಬಾವನ್ನವರ ಅವರನ್ನು ಗೋಸಾವಿ ಸಮಾಜದ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಕುಮಾರ ಭಾರತಿ, ಶ್ಯಾಮ್ ಬಾವನ್ನವರ, ಸುಧಾಕರ ಗಿರಿ, ಅನೀಲ ಬಾವನ್ನವರ, ಪ್ರವೀಣ ಗಿರಿ, ಕೃ?Á್ಣ ಪುರಿ, ಸಂದೀಪ್ ಬಾವನ್ನವರ, ಮೌಳೇಶ ಬಾವನ್ನವರ, ಮಾರುತಿ ಪುರಿ, ರೋಹನ ಬಾವನ್ನವರ, ಮಂಜುನಾಥ ಬಾವನ್ನವರ, ಶ್ರೀಕಾಂತ್ ಬಾವನ್ನವರ, ಸುನೀತಾ ಬಾವನ್ನವರ ಸೇರಿದಂತೆ ಇತರರು ಇದ್ದರು.




















