
ಚನ್ನಮ್ಮನ ಕಿತ್ತೂರ,ನ.೫: ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಿಂದ ಕೊಡುವ ೨೦೨೬ನೇ ಸಾಲಿನ `ವಿಶಿಷ್ಟ ಸೇವಾ ಪ್ರಮಾಣ ಪತ್ರ’ ಪ್ರಶಸ್ತಿಗೆ ಕೇಂದ್ರ ಕಾರ್ಯಾಗೃಹ ಸಹಾಯಕ ಅಧೀಕ್ಷಕ ಅಭಿಜಿತ್ ಕುಬೇರ ಜಾಯಕ್ಕನವರ ಭಾಜನರಾಗಿದ್ದಾರೆ.
ತಾಲೂಕಿನ ತಿಗಡೊಳ್ಳಿ ಗ್ರಾಮದ ಇವರು ಸದ್ಯ ವಿಜಯಪುರ ಕೇಂದ್ರ ಕಾರ್ಯಾಗೃಹದಲ್ಲಿ ಸಹಾಯಕ ಅಧೀಕ್ಷಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರು ಕೇಂದ್ರ ಕಾರ್ಯಾಗೃಹದಲ್ಲಿ ನಡೆದ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಇವರ ಕಾರಾದಕ್ಷತೆ, ಭದ್ರತಾ ವ್ಯವಸ್ಥೆಯ ಬಲವರ್ಧನೆ, ಸಿಬ್ಬಂದಿ ತರಬೇತಿ ಹಾಗೂ ಬಂಧಿಗಳ ಸುಧಾರಣೆ ಮತ್ತು ಪುನರ್ ವಸತಿ ಕಾರ್ಯಗಳಿಗೆ ನೀಡಿದ ವಿಶೇ಼ಷ ಕೊಡುಗೆಯನ್ನು ಗುರುತಿಸಿ ಇಲಾಖೆಯ ಪೋಲಿಸ್ಮಹಾನಿರ್ದೇಶಕ ಅಲೋಕ್ಕುಮಾರ್(ಐಪಿಎಸ್) ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇದು ರೂ. ೧೦ ಸಾವಿರ ನಗದು ಹಾಗೂ ಸೇವಾ ಪ್ರಮಾಣಪತ್ರ ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಭಿಜಿತ್ ಅವರು ಕಾರಾಗೃಹ ಇಲಾಖೆಯಲ್ಲಿ ಉತ್ತಮ ಆಡಳಿತ ಮತ್ತು ಸುಧಾರಣಾ ಕಾರ್ಯಗಳಿಗೆ ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಈ ಗೌರವ ಪ್ರೇರಣೆಯಾಗಲಿದೆ. ಎಂದಿದ್ದಾರೆ.




















