
ಕಲಬುರಗಿ,ಮೇ.4-ನಗರದ ಗಂಜ್ ಪ್ರದೇಶದಲ್ಲಿ ಮಹಾನಗರ ಪಾಲಿಕೆ, ಕೆಎಂಎಫ್‍ಗೆ ಸಂಭಂದಿಸಿದ ಸ್ಥಳಗಳಲ್ಲಿ ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು, ಇಂದಿರಾಗಾಂಧಿ, ರಾಜಿವಗಾಂಧಿ ಪ್ರತಿಮೆಗಳನ್ನು ಸ್ಥಾಪಿಸಲು ಹೊರಟಿರೋದು ಖಂಡನಿಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ, ಲಕ್ಷ್ಮೀಕಾಂತ ಸ್ವಾದಿ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರವಣಕುಮಾರ ನಾಯಕ್, ಶ್ರೀ ರಾಮ ಸೇನೆ ಜಿಲ್ಲಾ ಅಧ್ಯಕ್ಷ ಮಹೇಶ ಕೆಂಭಾವಿ ಖಂಡಿಸಿದ್ದಾರೆ.
ವಿಚಿತ್ರ ಅಂದರೆ ದೇಶದ ಘಟಾನುಘಟಿ ಮಾಜಿ ಪ್ರಧಾನಿಗಳನ್ನು ಕಡೆಗಣಿಸಿ ಒಂದೆ ಕುಟುಂಬದ ಮೂವರು ಪ್ರಧಾನಿಗಳ ಪ್ರತಿಮೆ ಸ್ಥಾಪನೆಗೆ ಎನ್‍ಒಸಿಯನ್ನು ಪಡೆಯದೆ ಅಡಿಗಲ್ಲು ಹಾಕದೆ ಕದ್ದುಮುಚ್ಚಿ ಸದ್ದಿಲ್ಲದೆ ಕಾಮಗಾರಿ ಪ್ರಾರಂಭಿಸಿರೋದು ಅನುಮಾನಕ್ಕೆ ಎಡೆಮಾಡಿದೆ. ಕಲಬುರಗಿ ಮಹಾನಗರದಲ್ಲಿ ಪ್ರತಿಮೆಗಳು ಸ್ಥಾಪಿಸುವುದೆ ಆಗಿದ್ದರೆ ಜೈಜವಾನ್ ಜೈಕಿಸಾನ್ ಘೋಷಣೆಯಿಂದ ಅನ್ನದಾತನಿಗೆ ಗೌರವ ತಂದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರತಿಮೆ ಎಪಿಎಂಸಿಯಲ್ಲಿ ಸ್ಥಾಪಿಸಲಿ ಇನ್ನು ಕೆಎಂಎಪ್ ನಲ್ಲಿ ಸ್ಥಾಪಿಸಲು ಹೊರಟಿರೋದು ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಗಿನ ಪ್ರಬಾವಿ ಲಿಂಗಾಯತ್ ಮುಖಂಡರಲ್ಲೋಬ್ಬರಾಗಿದ್ದ ಮಾಜಿ ಮುಖ್ಯಮಂತ್ರಿ ವಿರೆಂದ್ರ ಪಾಟೀಲರನ್ನು ಅವಮಾನಕರ ರೀತಿಯಲ್ಲಿ ವಿಮಾನ ನಿಲ್ದಾಣದಲ್ಲೆ ಮುಖ್ಯಮಂತ್ರಿ ಸ್ಥಾನದಿಂದ ಕೇಳಗಿಳಿಸಿದ್ದ ಮಾಜಿ ಪ್ರಧಾನಿ ರಾಜಿವಗಾಂಧಿ ಪ್ರತಿಮೆ ಸ್ಥಾಪನೆ ಕೈಬಿಟ್ಟು ಮಾಜಿ ರಾಷ್ಠ್ರಪತಿ ಡಾ.ಅಬ್ದುಲ್ ಕಲಾಂ ಪ್ರತಿಮೆ ಕೆಎಂಎಫ್‍ನಲ್ಲಿ ಕೂಡಿಸಲಿ ಮಹಾನಗರ ಪಾಲಿಕೆಯಲ್ಲಿ ಇಂದಿರಾಗಾಂಧಿ ಪ್ರತಿಮೆಗೆ ಬದಲಾಗಿ ನಮ್ಮ ನೇರೆಯ ರಾಜ್ಯದವರಾದ ಪಿ ವಿ ನರಸಿಂಹರಾವ್ ಪ್ರತಿಮೆ ಸ್ಥಾಪಿಸಲಿ ಇಲ್ಲಾ ದೇಶದ ಎಲ್ಲಾ ಪ್ರಧಾನಿಗಳ ಹಾಗು ಕಲ್ಯಾಣ ಕರ್ನಾಟಕ ಪ್ರದೇಶ ವಿಮೋಚನೆಗಾಗಿ ಶ್ರಮಿಸಿದ ಮಹಾನುಭಾವರ, ಕಲಬುರ್ಗಿ ಜಿಲ್ಲೆಯಿಂದ ಮುಖ್ಯಮಂತ್ರಿಗಳಾಗಿದ್ದಂತಹವರ ಪ್ರತಿಮೆಗಳನ್ನು ಸ್ಥಾಪಿಸಲಿ ಅದಿ ಬಿಟ್ಟು ಒಂದೆ ಕುಟುಂಬದ ರಾಜಕಾರಣಿಗಳ ಪ್ರತಿಮೆ ಸ್ಥಾಪಿಸುವುದಕ್ಕೆ ಮುಂದಾದರೆ ಉಗ್ರ ಹೋರಾಟ ಅನಿವಾರ್ಯವಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.






















