
ಕಲಬುರಗಿ : ಪ್ರಸ್ತುತ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ದೇಶಿ ಉದ್ಯಮಗಳಾದ ಅಮುಲ್, ಇಪ್ಕೋ, ನಂದಿನಿ ಇಂತಹ ಬೃಹತ್ ಸಂಸ್ಥೆಗಳು ಮುಕ್ತ ಆರ್ಥಿಕ ನೀತಿಯ ಸವಾಲುಗಳಿಗೆ ಆರೋಗ್ಯಕರ ಪೈಪೋಟಿ ನೀಡುವ ಮೂಲಕ ಸಹಕಾರ ಕ್ಷೇತ್ರವನ್ನು ಜನಪ್ರಿಯಗೊಳಿಸುತ್ತಿವೆ ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಸ್. ಎಸ್. ಸುಭಾಶಚಂದ್ರ ಬರ್ಮಾ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಗಾಂಧಿ ಸಭಾಂಗಣಲದಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ “ಸಹಕಾರ ತತ್ವ” ವಿಷಯ ಕುರಿತು ಚರ್ಚಾಸ್ಪರ್ಧೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ದೇವಿಂದ್ರಪ್ಪ ತೇಲ್ಕರ್ ಸರಕಾರಿ ಮಹಾವಿದ್ಯಾಲಯದ ಸ್ವಾಯತ್ತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಟಿ. ಗುರುಬಸಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರ್ನಾಟಕ ಇನ್ಸಟ್ಯೂಟ್ ಆಪ್ ಕೋ-ಆಪರೇಟಿವ್ ಮ್ಯಾನೇಜಮೆಂಟನ ಪ್ರಾಂಶುಪಾಲ ಅರುಣಕುಮಾರ ಹರಸೂರ ಅತಿತಿಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟದ ಜಿಲ್ಲಾ ಸಹಕಾರ ಶಿಕ್ಷಕಿ ಶ್ರೀಮತಿ ಇಸ್ಮಾಯಿಲ್ ಬೀ ವಂದಿಸಿದರು. ಶಿಕ್ಷಕೇತರ ಸಿಬ್ಬಂದಿ ದೇವೇಂದ್ರಪ್ಪ, ಎಸ್. ಹುಲಿಕರ್, ಮಾಳಪ್ಪ ಶಾಂತಪ್ಪ ಸೇರಿದಂತೆ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.
ಸ್ನಾತಕ ವಿದ್ಯಾರ್ಥಿಗಳು ‘ವಿಶ್ವದ ಸಮಸ್ಯೆಗಳಿಗೆ ಸಹಕಾರ ತತ್ವ ಮಾತ್ರವೇ ಪರಿಹಾರ ನೀಡಬಲ್ಲದು’, ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ‘ಬಡತನ ನಿವಾರಣೆ-ನಿರುದ್ಯೋಗ ಸಮಸ್ಯೆಗೆ ಸಹಕಾರ ತತ್ವವೇ ಪರಿಹಾರ’ ಕುರಿತು ಪರ ಮತ್ತು ವಿರೋಧವಾಗಿ ಮಾತನಾಡಿದರು.
ವಿಜೇತ (ಸ್ನಾತಕ) ವಿದ್ಯಾರ್ಥಿಗಳ ವಿವರ : ಶ್ರೀಮುರುಘರಾಜೇಂದ್ರ ಸ್ವಾಮೀಜಿ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ರೇವಣಸಿದ್ದಪ್ಪ ಪೂಜಾರಿ (ಪರವಾದ-ಪ್ರಥಮ), ಹಮೀದ್ ಪಿಯಾರೆ ಬಿ.ಎಡ್. ಕಾಲೇಜಿನ ತಿಮ್ಮಪ್ಪ ಟಿ (ದ್ವಿತೀಯ), ಆರ್ಯನ್ ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ಐಶ್ವರ್ಯ (ತೃತೀಯ) ಸ್ಥಾನ ಪಡೆದರು.
ಹಮೀದ್ ಪಿಯಾರೆ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ಮಲ್ಲಿಕಾರ್ಜುನ (ವಿರೋಧವಾದ-ಪ್ರಥಮ) ಹಮೀದ್ ಪಿಯಾರೆ ಬಿ.ಎಡ್ ಕಾಲೇಜಿನ ಶಶಿಧರ್ (ದ್ವಿತೀಯ), ಆರ್ಯನ್ ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ಹರೀಶಕುಮಾರ್ (ತೃತೀಯ) ಸ್ಥಾನ ಪಡೆದರು.
ವಿಜೇತ (ಸ್ನಾತಕೋತ್ತರ) ವಿದ್ಯಾರ್ಥಿಗಳ ವಿವರ: ಗುಲಬರ್ಗಾ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿದ್ಯಾರ್ಥಿ ಅಣವೀರಪ್ಪ (ಪರವಾದ-ಪ್ರಥಮ) ಶ್ರೀಮುರುಘರಾಜೇಂದ್ರ ಸ್ವಾಮೀಜಿ ಕಾಲೇಜಿನ ವಿದ್ಯಾರ್ಥಿನಿ ಭಾಗ್ಯಶ್ರೀ (ದ್ವಿತೀಯ) ಸ್ಥಾನ ಪಡೆದರು. ಅತಿಥಿ ಗಣ್ಯರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.























