Home ಜಿಲ್ಲೆ ಕಲಬುರಗಿ ಕೆ.ಬಿ.ಎನ್ ಆಸ್ಪತ್ರೆಯಲ್ಲಿ: ವಿಭಿನ್ನ ವಿಧಾನಗಳ ಸುಧಾರಿತ ಲ್ಯಾಪರೊಸ್ಕೋಪಿ ಕಾರ್ಯಾಗಾರ

ಕೆ.ಬಿ.ಎನ್ ಆಸ್ಪತ್ರೆಯಲ್ಲಿ: ವಿಭಿನ್ನ ವಿಧಾನಗಳ ಸುಧಾರಿತ ಲ್ಯಾಪರೊಸ್ಕೋಪಿ ಕಾರ್ಯಾಗಾರ

ಕಲಬುರಗಿ: ಖಾಜಾ ಬಂದಾನವಾಜ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ಸಂಘದ ಸಹಯೋಗದಲ್ಲಿ ಕೆಎಸ್‍ಓಜಿಎ ದ 2026ರ ಸಮ್ಮೇಳನವು ಖಾಜಾ ಬಂದಾನವಾಜ ಬೋಧನಾ ಸಾಮಾನ್ಯ ಆಸ್ಪತ್ರೆಯಲ್ಲಿ (ಕೆಬಿಎನ್‍ಟಿಗಿಎಚ್)
ಹಿಸ್ಟರೆಕ್ಟಮಿ :ವಿಭಿನ್ನ ವಿಧಾನಗಳು ಮತ್ತು ಸುಧಾರಿತ ಲ್ಯಾಪರೊಸ್ಕೋಪಿ ಕಾರ್ಯಾಗಾರವು ಶುಕ್ರವಾರ ಯಶಸ್ವಿಯಾಗಿ ನೆರವೇರಿತು. .
ಕಾರ್ಯಾಗಾರದ ಮಹತ್ವವನ್ನು ಉಲ್ಲೇಖಿಸಿದ ಪೆÇ್ರ. ಸೈಯದ್ ಅಶ್ಫಾಕ್ ಅಹಮದ್ ಅವರು, “ಈ ಕಾರ್ಯಾಗಾರವು ಅನೇಕ ಮಹಿಳೆಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲ ಅತ್ಯುತ್ತಮ ವೇದಿಕೆಯಾಗಿದೆ. ಇಲ್ಲಿ ಭಾಗವಹಿಸಿದವರು ತಜ್ಞರೊಂದಿಗೆ ನೇರ ಸಂವಾದ ನಡೆಸಿ, ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬೆಳವಣಿಗೆಗಳ ಕುರಿತು ಉಪಯುಕ್ತ ಮಾಹಿತಿ ಪಡೆದುಕೊಂಡಿದ್ದಾರೆ” ಎಂದು ಹೇಳಿದರು. ಇದು ಮಹಿಳೆಯರಿಗೆ ಜೀವನ ಬದಲಾಯಿಸುವ ಅವಕಾಶ ಹಾಗೂ ಆಧುನಿಕ ಚಿಕಿತ್ಸೆ ಎಂದರು.
ಇದೇ ವೇಳೆ ಆಸ್ಪತ್ರೆಯ ಧೈಯೋದ್ದೇಶಗಳನ್ನು ಹಂಚಿಕೊಂಡ ಅವರು ಕೆ.ಬಿ.ಎನ ಆಸ್ಪತ್ರೆಯು ಸಮಾಜದ ಪ್ರತಿಯೊಬ್ಬ ರೋಗಿಗೂ, ವಿಶೇಷವಾಗಿ ಬಡ ಹಾಗೂ ಅಗತ್ಯವಿರುವ ಜನರಿಗೆ ಅತ್ಯುತ್ತಮ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸಲು ಬದ್ಧವಾಗಿದೆ.
ಈ ಭಾಗದಲ್ಲೇ ಅತ್ಯಂತ ಸುಸಜ್ಜಿತ ಹಾಗೂ ಮುಂಚೂಣಿ ವೈದ್ಯಕೀಯ ಕೇಂದ್ರವಾಗುವ ನಿಟ್ಟಿನಲ್ಲಿ, ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಆಸ್ಪತ್ರೆಯ ವತಿಯಿಂದ ನಿರಂತರವಾಗಿ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಬಿಎನ ವಿವಿಯ ಕುಲಸಚಿವ ಮೀರ ವಿಲಾಯತ್ ಅಲಿ ಅವರುಮಾತನಾಡುತ್ತ ಸಮಾಜಕ್ಕೆ ನಿರಂತರ ಸೇವೆ ಸಲ್ಲಿಸುತ್ತಿರುವ ಕೆ.ಬಿ.ಎನ್. ವಿಶ್ವವಿದ್ಯಾಲಯದ ಕಾರ್ಯವನ್ನು ಶ್ಲಾಘಿಸಿದರು. ಸಮಾಜದ ಸೇವೆ ಮತ್ತು ವೈದ್ಯಕೀಯ ಕ್ಷೇತ್ರದ ಜ್ಞಾನವನ್ನು ನವೀಕರಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ ಎಂದರು. “ಇಂತಹ ಕಾರ್ಯಾಗಾರಗಳು ಪ್ರಸ್ತುತ ಕ್ಷೇತದ ಜ್ಞಾನವನ್ನು ನವೀಕರಿಸಲು ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಅತ್ಯಂತ ಅಗತ್ಯವಾಗಿವೆ” ಎಂದು ತಿಳಿಸುತ್ತಾ, ಕಾರ್ಯಕ್ರಮದ ಸಂಘಟಕರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ಸಂಘದ ಮುಖ್ಯ ಪೆÇೀಷಕರಾದ ಡಾ ಎಮ್ ಜಿ ಹಿರೇಮಠ ಸಂಫದ ಬಗ್ಗೆ ವಿವರಿಸಿದರು. ಕೆಬಿಎನ್ ಆಸ್ಪತ್ರೆ ಬೆಳೆದು ನಿಂತ ಬಗೆ ನೋಡಿ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಕಸೊಗ ರಾಜ್ಯಾಧ್ಯಕ್ಷ ಡಾ ರಾಜಶ್ರೀ ಪಾಲದಿ ಸ್ವಾಗತಿಸಿದರು. ಡಾ ಫರತ್ ನಿರೂಪಿಸಿದರು. ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಮೆಹವೀಶ್ ಅಂಜುಮ ವಂದಿಸಿದರು.
ಓಪರೇಶನ ಥೇಟರನಲ್ಲಿ ಮಾಡಿದ 10 ಸರ್ಜರಿಗಳನ್ನು ಸೆಮಿನಾರ ಹಾಲನಲ್ಲಿ ನೇರ ಪ್ರಸಾರ ಮಾಡಲಾಯಿತು. ಈ ವೇಳೆ ಸಂವಾದವೂ ನಡೆಯಿತು.
ರಾಜ್ಯದ ಎಲ್ಲೆಡೆಯಿಂದ ಸುಮಾರು 150 ಅಭ್ಯರ್ಥಿಗಳು ನೊಂದಣಿ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಐ ಕ್ಯೂಎಸಿ ನಿರ್ದೇಶಕ ಡಾ ಅಬ್ದುಲ ಬಸೀರ, ಮೆಡಿಕಲ್ ಡೀನ ಡಾ. ಗುರುಪ್ರಸಾದ, ಅಕ್ಯಾಡೆಮಿಕ ಡೀನ ಡಾ ಜಮಾ ಮೂಸ್ವಿ, ಮೆಡಿಕಲ ಆಧೀಕ್ಷಕ ಡಾ ಸಿದ್ಧಲಿಂಗ ಚೆಂಗಟಿ, ಆಡಳಿತಧಿಕಾರಿ ಡಾ ರಾಧಿಕಾ ಪ್ರಸಾದ ಡಾ. ಸುಜಾತಾ,ಡಾ. ಆಯೇಷಾ ಹುಮೇರಾ, ಡಾ. ನಿವೇದಿತಾ,ಡಾ. ಶಾಂತಾ,ಡಾ. ಫರ್ಹತ್ ಕಾಜಿಮ, ಡಾ. ಪ್ರಿಯಾಂಕಾ ಬಿರಾದಾರ,ಡಾ. ಝೋಹ್ರಾ ಅಂಜುಮ, ಡಾ. ಸೈದಾ ಆಯೇಷಾ, ಡಾ. ಶ್ರೇಯಾಅಂಕ, ಡಾ. ಮಿಸ್ಬಾ ಹಾಜರಿದ್ದರು.