Home ಜಿಲ್ಲೆ ಕಲಬುರಗಿ ಮಳಖೇಡ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಸಿದ್ದು ಪಾಟೀಲ್ ಬಿಜನಳ್ಳಿ ಅನುಮಾನಾಸ್ಪದ...

ಮಳಖೇಡ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಸಿದ್ದು ಪಾಟೀಲ್ ಬಿಜನಳ್ಳಿ ಅನುಮಾನಾಸ್ಪದ ಸಾವು?

ಸೇಡಂ,ನ,05: ತಾಲೂಕಿನಲ್ಲಿಯೇ ಅತಿ ಹೆಚ್ಚು ಬೆಳೆ ವಿಮೆ ಮಾಡಿಸುವಲ್ಲಿ ಪ್ರಮುಖವಾಗಿ ಮಳಖೇಡ ಜಿಪಂ ವ್ಯಾಪ್ತಿಯಲ್ಲಿ ಬರುವ ರೈತರಿಗೆ ತೊಗರಿ ಸೇರಿದಂತೆ ವಿವಿಧ ಬೆಳೆ ವಿಮೆ ಮಾಡಿಸುವಲ್ಲಿ ಹಾಗೂ ರೈತರು ಸುತ್ತಮುತ್ತಲಿನ ಜನರು ಪ್ರೀತಿ ಪಾತ್ರರಾಗಿದ ಸಿದ್ದು ಪಾಟೀಲ್ ಬಿಜನಳ್ಳಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬೆಳೆ ವಿಮೆ ಹಾಗೂ ಸರ್ಕಾರಿ ಯೋಜನೆಗಳು ಪ್ರತಿಯೊಬ್ಬರಿಗೂ ತಿಳಿಸಿ ಫಲಾನುಭಗಳನ್ನಾಗಿ ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಇವರ ಸಾವು ಕೊಲೆಗೆ ಕಾರಣ ಯಾರು ಎಂದು ಸಾರ್ವಜನಿಕರ ಒಲಿಯಲ್ಲಿ ಕೇಳಿ ಬರುತ್ತಿವೆ. ಘಟನೆ ಇನಲ್ಲೆ ಸೋಮವಾರ ರಾತ್ರಿ ಒಂಬತ್ತು ಗಂಟೆಗೆ ಅವರ ತಾಯಿಗೆ ಬೆಂಗಳೂರಿಗೆ ಕಳಿಸಲು ಸೇಡಂ ತೆರಳಿದ ನಂತರ ಮನೆಗೆ ಬಂದು ಸ್ನೇಹರ ಜೋತೆ ಊಟಕ್ಕೆ ಹೋಗುವುದಾಗಿ ಅವರ ಧರ್ಮಪತ್ನಿಗೆ ತಿಳಿಸಿ ಪೆÇೀನ್ ಮತ್ತು ದ್ವಿಚಕ್ರ ಬಿಟ್ಟು ಹೊಗಿ ಬೆಳಿಗ್ಗೆ 6 ಗಂಟೆಗೆ ಮೈಯೆಲ್ಲಾ ಬಟ್ಟೆ ಅರಿದು ಬಂದಿದ್ದ ಕಂಡು ಅವರ ಧರ್ಮಪತ್ನಿ ಏನಾಗಿದೆ ಎಂದು ಕೇಳಿದಾಗ ಸ್ವಲ್ಪ ಜಗಳವಾಗಿದೆ ನನ್ನಗೆ ಅರ್ಧ ಗಂಟೆ ನಿದ್ದೆ ಮಾಡುವೆ ಎಬ್ಬಿಸ ಬೇಡಿ ಎಂದು ಹೇಳಿದ ಮೇಲೆ ಸಾವನ್ನಪ್ಪಿದ್ದಾನೆ ಎಂದು ಪಿಎಸ್‍ಐ ಅವರಿಗೆ ಪತ್ನಿ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.?ಶೀಘ್ರವೇ ಸತ್ಯಾಸತ್ಯತೆ ಹೊರಬರಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಮೃತರ ಮೊಬೈಲ್ ಕರೆಗಳ ವಿವರವನ್ನು (ಅಆಖ) ವಿಶ್ಲೇಷಿಸಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಇನ್ನು ಕೆಲವೇ ದಿನಗಳಲ್ಲಿ ಕೊಲೆಗೆ ನಿಖರ ಮಾಹಿತಿ ನೀಡಲಾಗುವುದು.
ಶರಣಪ್ಪ ಜಾಕನಳ್ಳಿ ಪಿಎಸ್‍ಐ ಪೆÇೀಲಿಸ್ ಠಾಣೆ ಮಳಖೇಡ