Home ಜಿಲ್ಲೆ ಕಬ್ಬು ನುರಿಸುವ ಹಂಗಾಮು ಪೂಜಾ ಸಮಾರಂಭ

ಕಬ್ಬು ನುರಿಸುವ ಹಂಗಾಮು ಪೂಜಾ ಸಮಾರಂಭ


ಚನ್ನಮ್ಮನ ಕಿತ್ತೂರ,ನ.೧: ಪ್ರಜ್ಞಾವಂತ ರೈತರೆಲ್ಲರೂ ನೀವು ನನ್ನ ಹೆಗಲಿನ ಮೇಲೆ ದೊಡ್ಡ ಜವಾಬ್ದಾರಿ ಹೊರಸಿದ್ದೀರಿ ಅದಕ್ಕೆ ಚ್ಯುತಿ ಬರದ ಹಾಗೇ ಕಾರ್ಖಾನೆ ಏಳಿಗೆಗೆ ಹಗಲಿರುಳು ಶ್ರಮಿಸಿ ಅಭಿವೃದ್ದಿ ಪಡಿಸುವುದೇ ನನ್ನ ಮುಖ್ಯ ಉದ್ದೇಶವೆಂದು ವಿ.ಪ. ಸದಸ್ಯ ಹಾಗೂ ಕಾರ್ಖಾನೆ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಹೇಳಿದರು.


ತಾಲೂಕಿನ ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯರ್ ಪೂಜಾ, ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸುವ ಮಿಲ್ಲ್ ಅಡಿಗಲ್ಲು ಹಾಗೂ ಕಾರ್ಖಾನೆ ಲಾಂಚನ ಅನಾವರಣ ಸಮಾರಂಭದಲ್ಲಿ ಮಾತನಾಡಿ ರೂ. ೧೦ ಕೋಟಿ ಖರ್ಚು ಮಾಡಿ ಕಾರ್ಖಾನೆ ನವೀಕರಣಗೊಳಿಸಲಾಗಿದೆ ಎಂದರು. ಹಿಂದಿನ ವರ್ಷದ ಕಬ್ಬಿನ ಬಿಲ್ ಸರ್ಕಾರದ ಆದೇಶದಂತೆ ಪಾವತಿಸಲಾಗಿದೆ. ೧೭ ಸಾವಿರ ಶೇರುದಾರರಿಗೆ ನಂಬಿಕೆಗೆ ದ್ರೋಹ ಬಗೆಯದಂತೆ ನಡೆದುಕೊಳ್ಳುತ್ತೇವೆ.


ಸಕ್ಕರೆ ಹಾಗೂ ಕಬ್ಬಿನ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರಗಳು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ನಮ್ಮ ಕಾರ್ಖಾನೆ ಬಹಳ ಹಳೆಯದ್ದು ಇದನ್ನು ಅಭಿವೃದ್ದಿ ಮಾಡಲು ಕಾರ್ಖಾನೆ ಅಧ್ಯಕ್ಷ ಹಟ್ಟಿಹೊಳಿಯವರು ಬಹಳ ಶ್ರಮವಹಿಸುತ್ತಿದ್ದಾರೆ. ಹಂತ-ಹAತವಾಗಿ ಅಭಿವೃದ್ದಿ ಪಡಿಸಲಾಗುತ್ತದೆ ಎಂದು ಹೇಳಿದರು.
ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶಶಿಕಾಂತ ಪಾಟೀಲ ಮಾತನಾಡಿ ಕಾರ್ಖಾನೆ ಅಭಿವೃದ್ದಿಗೆ ರೈತರು ಕಾರ್ಮಿಕರು ಶ್ರಮವಹಿಸಿ ಅಭಿವೃದ್ದಿ ಪಡಿಸಿದಾಗಲೇ ಹಿಂದಿನ ಗತವೈಭವ ಮರುಕಳಿಸಲು ಸಾಧ್ಯ ನಿಮ್ಮೆಲ್ಲರ ಸಹಕಾರ ಅವಶ್ಯ ಈಗಾಗಲೇ ಕಾರ್ಖಾನೆ ಪ್ರಾರಂಭಿಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆಎಂದರು.
ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿ, ಬೈಲೂರ ನಿಷ್ಕಲ ಮಂಟಪ ನಿಜಗುಣಾನಂದ ಸ್ವಾಮಿಜಿ, ಕಾದ್ರೋಳ್ಳಿ ಸೀಮಿಮಠ ಪಾಲಾಕ್ಷ ದೇವರು, ನಾಗನೂರ ರುದ್ರಾಕ್ಷಿಮಠದ ಅಲ್ಲಮ ಪ್ರಭು ಸ್ವಾಮಿಜೀ, ಅರಳಿಕಟ್ಟಿ ತೋಟಂದಾರ್ಯ ವಿರಕ್ತಮಠ ಶಿವಮೂರ್ತಿ ಸ್ವಾಮಿಜೀ, ದತ್ತವಾಡ ವೃಷಿಕೇಶಾನಂದ ಬಾಬಾಮಹಾರಾಜ ಉಪಸ್ಥಿತರಿದ್ದರು. ಉಪಾಧ್ಯಕ್ಷ ಶಿವನಗೌಡ ಪಾಟೀಲ ವಂದಿಸಿದರು. ವಿವೇಕ ಕುರಗುಂದ, ಸುರೇಶ ಗಣಾಚಾರಿ ನಿರೂಪಿಸಿದರು. ಸರ್ವ ನಿರ್ದೇಶಕ ಮಂಡಳಿ, ಸಿಬ್ಬಂದಿ, ಕಾರ್ಮಿಕರು, ರೈತರು, ಸಾರ್ವಜನಿಕರಿದ್ದರು. ಹೆಚ್ಚಿಗೆ ಕಬ್ಬು ಪೂರೈಸಿದ ರೈತರನ್ನು ಸತ್ಕರಿಸಲಾಯಿತು.