Home ಜಿಲ್ಲೆ ಕಲಬುರಗಿ ಸುಕಿ ಮ್ಯೂಸಿಕಲ್ ಸ್ಟುಡಿಯೋದಲ್ಲಿ ಎಸ್ಪಿಬಿ ಹುಟ್ಟುಹಬ್ಬ

ಸುಕಿ ಮ್ಯೂಸಿಕಲ್ ಸ್ಟುಡಿಯೋದಲ್ಲಿ ಎಸ್ಪಿಬಿ ಹುಟ್ಟುಹಬ್ಬ

ಕಲಬುರಗಿ,ಜೂ 8: ನಗರದ ಸುಕಿ ಮ್ಯೂಸಿಕಲ್ ಸ್ಟುಡಿಯೋದಲ್ಲಿ ಗಾನ ಲೋಕದ ನಕ್ಷತ್ರ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ 80 ನೇ ಹುಟ್ಟುಹಬ್ಬ ಆಚರಿಸಲಾಯಿತು
ಎಸ್ಪಿಬಿ ಯವರಿಗೆಗಾಯನ ಎಂದರೆ ಅಚ್ಚುಮೆಚ್ಚು. ಸತತ ಅಧ್ಯಯನ ಮಾಡಿ ಗಾಯನದ ಇಂಚಿಂಚು ಸಣ್ಣ ಸಣ್ಣ ವಿಷೆಯಗಳನ್ನು ನಿರಾಕರಿಸದೆ ಅವುಗಳ ಅಭ್ಯಾಸಮಾಡಿ ಹದಿನಾರು ಭಾಷೆಗಳಲ್ಲಿ ಹಾಡಿದ ಅವರು ಇಂದು ಧ್ರುವತಾರೆಯಾಗಿ ನಮ್ಮಂತ ಗಾಯಕರಿಗೆ ಸ್ಪೋರ್ತಿ ದಾಯಕರಾಗಿ ಇಂದು ಎಷ್ಟೋ ಗಾಯಕರಿಗೆ ದಾರಿ ದೀಪ ಆಗಿದ್ದಾರೆ.
ಮೂಲತಃ ಆಂಧ್ರದ ನೆಲ್ಲೂರಿನಲ್ಲಿ 1946 ಜೂನ್ 4 ರಂದು ಹುಟ್ಟಿದ ಅವರು ಎಂದು ದಣಿವರಿಯದೆ ಸಂಗೀತ ಲೋಕ ಮರೆಯದ ಮಾಣಿಕ್ಯವಾದರು.40 ಸಾವಿರಕ್ಕೂ ಹೆಚ್ಚು 16 ಭಾಷೆಗಳಲ್ಲಿ ಹಾಡಿದರು.
ಚಿತ್ರದಲ್ಲಿ ನಟಿಸುವ ನಟರ ಧ್ವನಿಯನ್ನು ಅನುಕರಣೆಯ ರೀತಿಯಲ್ಲಿ ಹಾಡುತ್ತಿದ್ದಾಗ ಸ್ವತಃ ನಾಯಕ ನಟರೆ ಬೆರಗಾಗುತ್ತಿದ್ದರು .ಈ ಸಂದರ್ಭದಲ್ಲಿ ಕಿರಣ್ ಪಾಟೀಲ್ ಕವಿರಾಜ್ ಉದಯಕುಮಾರ ಸಾಗರವಾಗಮಾರೆ ಸೊನಮ್ಮ ಮುಂತಾದವರು ಅವರು ಹಾಡಿದ ಹಾಡುಗಳನ್ನು ಹಾಡಿ ಹುಟ್ಟುಹಬ್ಬಕ್ಕೆ ಮೆರಗನ್ನು ತಂದರು.
ಶಿವಶಂಕರ ಕಣ್ಣಿ ರಾಜಲಿಂಗಮ್ ದತ್ತು ಉದಯಕರ ಹಾಗು ಬರಗಲಿ ಅವರು ಹಾಜರಿದ್ದರು