Home ಮುಖಪುಟ ಸುದ್ದಿ ತಂದೆ, ಅಕ್ಕನ ಕೊಂದ ಮಗ ಆತ್ಮಹತ್ಯೆಗೆ ಯತ್ನ

ತಂದೆ, ಅಕ್ಕನ ಕೊಂದ ಮಗ ಆತ್ಮಹತ್ಯೆಗೆ ಯತ್ನ

ಕೊಪ್ಪಳ,ಜೂ.೭- ವಿದ್ಯಾರ್ಥಿಯೊಬ್ಬನಿಗೆ ಮೊಬೈಲ್ ನಲ್ಲಿ ಆನ್ ಲೈನ್ ಗೇಮ್ ಆಡದಂತೆ ಬುದ್ದಿವಾದ ಹೇಳಿದ್ದಕ್ಕೆ ತಂದೆ ಹಾಗೂ ಅಕ್ಕನನ್ನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನುಷ ಘಟನೆ ಗಂಗಾವತಿ ತಾಲೂಕಿನ ಅಯೋಧ್ಯೆ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಅಯೋಧ್ಯೆ ಗ್ರಾಮದ ಪ್ರಗತಿ (೧೯) ಹಾಗೂ ವೆಂಕಟನಾಯ್ಡು (೪೫) ಕೊಲೆಯಾದವರು.


ಗಾಯಗೊಂಡಿರುವ ತಾಯಿ ಸೌಜನ್ಯ (೪೦) ಅವರನ್ನು ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರ ಸ್ಥಿತಿ ಚಿಂತಾಜನಕವಾಗಿದೆ. ಅಯೋಧ್ಯೆ ಗ್ರಾಮದ ಸರಕಾರಿ ಶಾಲೆಯ ಸಮೀಪದ ಮನೆಯೊಂದರಲ್ಲಿ ಕೃತ್ಯ ನಡೆಸಿದ ಮಗ ಸಾಯಿ ನಾಯ್ಡು ಆತ್ಮಹತ್ಯೆ ಯತ್ನಿಸಿದ್ದು,ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಗಂಗಾವತಿ ವಡ್ಡರಹಟ್ಟಿಯ ವಿದ್ಯಾನಿಕೇತನ ಕಾಲೇಜಿ ದ್ವಿತೀಯ ಪಿಯುಸಿ ಓದುತ್ತಿರುವ ಸಾಯಿ ನಾಯ್ಡು (೧೮) ಯಾವಾಗಲೂ ಮೊಬೈಲ್ ನಲ್ಲಿ ಆನ್ ಲೈನ್ ಗೇಮ್ ಆಡುತ್ತಿದ್ದ ಎಂದು ತಿಳಿದು ಬಂದಿದೆ.


ನಿನ್ನೆ ರಾತ್ರಿ ಅಕ್ಕ ಪ್ರಗತಿ (೨೦) ಆನ್‌ಲೈನ್ ಗೇಮಿಂಗ್ ಆಡದಂತೆ ಬುದ್ದಿ ಮಾತು ಹೇಳಿದ್ದಾರೆ. ಇಬ್ಬರ ಮಧ್ಯೆ ತೀವ್ರ ಜಗಳವಾಗಿದ್ದು ಸಾಯಿ ನಾಯ್ಡು ಚಾಕುವಿನಿಂದ ಅಕ್ಕನಿಗೆ ಇರಿದಿದ್ದಾನೆ. ಜಗಳ ಬಿಡಿಸಲು ಬಂದ ತಂದೆ ಯಂಕಣ್ಣ ನಾಯ್ಡು ತಾಯಿ ಸೌಜನ್ಯ ಮೇಲೂ ಸಾಯಿ ನಾಯ್ಡು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ಸ್ಥಳದಲ್ಲಿಯೇ ಅಕ್ಕ ಪ್ರಗತಿ ಸಾವನ್ನಪ್ಪಿದರೆ,


ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ದಾಖಲ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯಂಕಣ್ಣ (೪೮) ಮೃತ ಪಟ್ಟಿದ್ದು ತಾಯಿ ಸೌಜನ್ಯ ಹಾಗೂ ಆರೋಪಿ ಸಾಯಿ ನಾಯ್ಡುಗೆ ಬಳ್ಳಾರಿ ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಸ್ಥಳಕ್ಕೆ ಗಂಗಾವತಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಗನೇ ಕೊಲೆ ಮಾಡಿರುವುದಾಗಿ ಮೃತ ವೆಂಕಟನಾಯ್ತು ತಂದೆ ತಾತಾರಾವ್ ದೂರು ನೀಡಿದ್ದಾರೆ. ವೆಂಕಟ ನಾಯ್ಡು ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ೧೦.೩೦ ಗಂಟೆಯ ವೇಳೆಗೆ ಗಲಾಟೆ ಕೇಳಿ ಬಂದಿದೆ. ಬಾಗಿಲು ಒಡೆದು ನೋಡಿದಾಗ ನಾಲ್ಕು ಜನರ ಮೇಲೆ ಚಾಕು ಹಾಕಿರುವುದು ಕಂಡು ಬಂದಿದೆ.


ಪ್ರಾಥಮಿಕ ತನಿಖೆಯಲ್ಲಿ ರಾತ್ರಿ ೭ ಸುಮಾರಿಗೆ ಈ ಕುಟುಂಬದವರು, ವೆಂಕಟ ನಾಯ್ಡು, ಅವರ ಪತ್ನಿ ಸೌಜನ್ಯ, ಮಗಳು ಪ್ರಗತಿ, ಮಗ ಸಾಯಿ ಹಾಗೂ ವೆಂಕಟ ನಾಯ್ಡು ಅವರ ಅಪ್ಪ-ಅಮ್ಮ ಹಣ್ಣುಹಂಪಲು ತಿಂದು, ಬಳಿಕ ರಾತ್ರಿ ೯ ಗಂಟೆಗೆ ಊಟ ಮಾಡಿ ಮಲಗಿದ್ದರು. ಸುಮಾರು ೧೦ ಗಂಟೆಗೆ ಮನೆಯಲ್ಲಿ ಜೋರಾದ ಶಬ್ಧ ಕೇಳಿಬಂದಿದ್ದು, ವೆಂಕಟ ನಾಯ್ಡು ಅವರ ತಂದೆ ಪಕ್ಕದ ಮನೆಯವರ ಸಹಾಯದೊಂದಿಗೆ ರೂಮ್ ಬಾಗಿಲು ತೆರೆದಾಗ ೪ ಜನರೂ ಗಾಯಗೊಂಡಿದ್ದರು. ವೆಂಕಟ ನಾಯ್ಡು, ಪತ್ನಿ ಸೌಜನ್ಯ, ಮಗಳು ಪ್ರಗತಿಗೆ ಗಂಭೀರ ಗಾಯಗಳಾಗಿದ್ದರೆ, ಮಗನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ತಕ್ಷಣ ಗಂಗಾವತಿ ಆಸ್ಪತ್ರೆಗೆ ಕರೆದೊಯ್ದಾಗ ಪ್ರಗತಿ ಸಾವನ್ನಪ್ಪಿದ್ದರು.


ಅಲ್ಲಿಂದ ಉಳಿದವರನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಿದ್ದು, ಇಂದು ಬೆಳಗ್ಗೆ ವೆಂಕಟ ನಾಯ್ಡು ಕೊನೆಯುಸಿರೆಳಿದಿದ್ದಾರೆ” ಎಂದು ಜಿಲ್ಲಾ ಎಸ್‌ಪಿ ರಾಮ್ ಎಲ್.ಅರಸಿದ್ದಿ ಮಾಹಿತಿ ನೀಡಿದ್ದಾರೆ.


ಗಾಯಾಳುಗಳನ್ನು ವಿಚಾರಿಸಿದಾಗ ನಾಲ್ವರೂ ಮಲಗಿದ್ದ ಸಂದರ್ಭದಲ್ಲಿ ಏಕಾಏಕಿ ಲೈಟ್ ಆಫ್ ಮಾಡಿ ಕುಟುಂಬದ ಸದಸ್ಯರಲ್ಲೇ ಒಬ್ಬರು ಚಾಕುವಿನಿಂದ ದಾಳಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ವೆಂಕಟ ನಾಯ್ಡು ಅವರ ತಂದೆ ದೂರು ನೀಡಿದ್ದು, ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಮೊಮ್ಮಗನ ಮೇಲೆ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ರಾಮ್ ಎಲ್.ಅರಸಿದ್ದಿ ತಿಳಿಸಿದ್ದಾರೆ.