
ಕಲಬುರಗಿ,ಜೂ 7: ನಗರದ ಅಂಬಾ ಭವಾನಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ನೂರಾರು ಜನರಿಗೆ ಕಣ್ಣಿನ ಆರೋಗ್ಯದ ಬಗ್ಗೆ ಅರಿವು ಮತ್ತು ಚಿಕಿತ್ಸೆ ಒದಗಿಸುವಲ್ಲಿ ಯಶಸ್ವಿಯಾಗಿದೆ.ಅನುಗ್ರಹ ಕಣ್ಣಿನ ಆಸ್ಪತ್ರೆ (ಭೋರುಕಾ ನೇತ್ರಾಲಯ), ಕಮಲ ಕೃಷ್ಣ ಸಮಾಜ ಕಲ್ಯಾಣ ಮತ್ತು ಶೈಕ್ಷಣಿಕ ಟ್ರಸ್ಟ್, ಮತ್ತು ಎಸ್. ಎಸ್. ಹೀರೆಮಠ ಫೌಂಡೇಶನ್, ಕಲಬುರಗಿ ಜಂಟಿಯಾಗಿ ಈ ಶಿಬಿರವನ್ನು ಆಯೋಜಿಸಿದ್ದರು.ಸ್ವಚ್ಛ ಕಣ್ಣು, ಸ್ವಚ್ಛ ದೃಷ್ಟಿ ಅಭಿಯಾನದ ಭಾಗವಾಗಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.ಶಿಬಿರದ ಚಾಲನೆಯನ್ನು ಎಂ ಎಸ್ ಪಾಟೀಲ ನರಿಬೋಳ ನೆರವೇರಿಸಿದರು
ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ತಮ್ಮ ಕಣ್ಣಿನ ಆರೋಗ್ಯವನ್ನು ಪರೀಕ್ಷಿಸಿಕೊಂಡರು. ಅನುಗ್ರಹ ಕಣ್ಣಿನ ಆಸ್ಪತ್ರೆಯ ಪ್ರಸಿದ್ಧ ನೇತ್ರತಜ್ಞರು ಶಿಬಿರದಲ್ಲಿ ಭಾಗವಹಿಸಿ ರೋಗಿಗಳಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಸಮಾಲೋಚನೆ ನೀಡಿದರು.ಶಿಬಿರದಲ್ಲಿ ದೃಷ್ಟಿ ಪರೀಕ್ಷೆ, ಕಣ್ಣಿನ ಒತ್ತಡ ಪರೀಕ್ಷೆ, ಕಣ್ಣಿನ ಪೆÇರೆ ತಪಾಸಣೆ, ಕಣ್ಣಿನ ಸೋಂಕು ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಕೈಗೊಳ್ಳಲಾಯಿತು. ತಪಾಸಣೆಯ ನಂತರ ಅಗತ್ಯವಿರುವ ರೋಗಿಗಳಿಗೆ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು ಮತ್ತು ಮುಂದಿನ ಚಿಕಿತ್ಸೆಯ ಬಗ್ಗೆ ಸಲಹೆ ನೀಡಲಾಯಿತು.ಅನುಗ್ರಹ ಆಸ್ಪತ್ರೆಯ ಆಡಳಿತಾಧಕಾರಿ ಅನಿಲ, ವ್ಯವಸ್ಥಾಪಕರಾದ ದತ್ತು ಹಾಗು ಸಿದ್ರಾಮಯ್ಯಾ ಎಸ್ ಹಿರೇಮಠ, ನಾಗಣ್ಣ ಪಾಟೀಲ, ಸಿ ಎನ್ ಬಾಬಳಗಾಂವ, ಶಂಕರ ವಡಗೇರಾ ಉಪಸ್ಥಿತರಿದ್ದರು


























