
ಜೇವರಗಿ,ಜೂ 7: ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಾಗುತ್ತಿದ್ದು ಹೆಚ್ಚಿನ ಬೆಲೆಗೆ ಮಾರಾಟ ನಡೆಯುತ್ತಿದೆ ಎಂದು ತಾಲೂಕು ಬಿಜೆಪಿವತಿಯಿಂದ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಂತರ ಪ್ರತಿಭಟನೆ ಮಾಡಿದರು
ಕೇಂದ್ರ ಸರ್ಕಾರ ಹಿತದೃಷ್ಟಿಯಿಂದ ನಿಷ್ಠ ಚಿಲ್ಲರೆ ಬೆಲೆ ನಿಗದಿ ಮಾಡಿದ್ದರೂ, ತಾಲೂಕಿನ ಕೆಲವು ಖಾಸಗಿ ಆಗ್ರೋ ಏಜೆನ್ಸಿಗಳು ಈ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚುದರಕ್ಕೆ ಮಾರಾಟ ಮಾಡುತ್ತಿರುವುದು ರೈತರಿಗೆ ಭಾರಿ ಹೊರೆ ಆಗಿದೆ.ಈ ಹಿನ್ನೆಲೆಯಲ್ಲಿ ಬಡ ಮತ್ತು ಮಧ್ಯಮ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ರೈತರ ಹಿತರಕ್ಷಣೆ ನಮ್ಮ ಪಕ್ಷದ ಪ್ರಮುಖ ಆದ್ಯತೆಯಾಗಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡರಾದ ಶೋಭ ಬಾಣಿ ಹೇಳಿದರು. ನಂತರ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿ ರೈತರಿಗೆ ತಾರತಮ್ಯವಿಲ್ಲದೆ ಸಕಾಲದಲ್ಲಿ ವಸಗೊಬ್ಬರ ಹಾಗೂ ಬೀಜ ವಿತರಣೆ ಹೆಚ್ಚು ದರಕ್ಕೆ ಮಾರಾಟ ಮಾಡುವಏಜೆನ್ಸಿಗಳ ವಿರುದ್ಧ ದಾಳಿ ಮತ್ತು ತನಿಖೆ ಪಿಎಸಿಎಎಸ್ ಮೂಲಕ ಗೊಬ್ಬರವಿತರಣೆಗೆ ಆದ್ಯತೆ ಕೇಂದ್ರ ಯೋಜನೆಗಳು ರೈತರಿಗೆಸಮರ್ಪಕವಾಗಿ ತಲುಪುವಂತೆ ಕ್ರಮ ಜರಗಿಸಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರೇವಣಸಿದ್ದಪ್ಪ ಸಂಕಲಿ ಮರಿಯಪ್ಪ ಬಡಿಗೇರ್ ತಾಲೂಕು ಬಿಜೆಪಿ ಅಧ್ಯಕ್ಷ ದೇವಿಂದ್ರ ಎಂ. ಮುತ್ತಕೋಡ ಬಿಜೆಪಿ ಮುಖಂಡರಾದಸುರೇಶ ಪಾಟೀಲ್ ,ಶಿಪ್ಪಣ್ಣ ರಾಠೋಡ್, ಬಾಬು ಬಿ ಪಾಟೀಲ್ ಬಸವರಾಜ ಗೌಡ ಮಾಲಿ ಪಾಟೀಲ್ ಶಾಂತು ಜಮಖಂಡಿ, ಭೀಮಾಶಂಕರ್ ಯಲಗೋಡ , ಷಣ್ಮುಖಪ್ಪ ಸಾಹು ಗೋಗಿ ಸಜ್ಜನ್ ಬಳಬಟ್ಟಿ ಸಿದ್ರಾಮಪ್ಪ ಸರಡಗಿ, ದಯಾನಂದ ಸ್ಥಾವರಮಠ, ಅನಿಲಕುಮಾರ್ ದೊಡ್ಡಮನಿ ನಿಂಗಪ್ಪ ರದ್ದೇವಾಡಗಿ ಸಾಗರ ಬಡಿಗೇರ್ ಹಣಮಂತ ಶಹಾಬಾದಿಕರ, ಸಂಗಮೇಶ್ ಸoಕಾಲಿ ನಿಜಗೌಡ ಯಲಗೋಡ್ ರಾಚಣ್ಣ ಹರನೂರ, ಪರಸುರಾಮ ದೊಡಮನಿ ಬಾವಿಕಟ್ಟಮರೆಪ್ಪ ಸುರೇಶ್ ಹಿಪ್ಪರಗಿ ಈಶ್ವರ್ ಹಿಪ್ಪರಗಿ ಸೇರಿದಂತೆ ಅನೇಕರು ಇದ್ದರು


























