
ಕಲಬುರಗಿ,ಜೂ 7: ಸಂಸ್ಕಾರ ಭಾರತಿ ಕಲಬುರಗಿ ಹಾಗೂ ನೂಪುರ ಸಂಸ್ಕøತಿ ನೃತ್ಯ ಮತ್ತು ಸಂಗೀತ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಅಧಿಕಮಾಸದ ನಿಮಿತ್ತ ಕಲಬುರಗಿ ನಗರದ ಜೈ ವೀರ ಹನುಮಾನ ದೇವಸ್ಥಾನದ ಆವರಣದಲ್ಲಿ 33 ಭರತನಾಟ್ಯ ಕಾರ್ಯಕ್ರಮ ಜರುಗಿತು.
ಜೈ ವೀರ ಹನುಮಾನ ದೇವಸ್ಥಾನ ಅಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಕೆಯುಡಿಎ ಮಾಜಿ ಅಧ್ಯಕ್ಷ ಅವಿನಾಶ್ ಕುಲಕರ್ಣಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೇಡಂ ತಾಲೂಕು ಗುಂಡೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರಾದ ವಂದನಾ ಠಾಕೂರ, ಜೈಕಿಶನ್ ಠಾಕೂರ್ ಅವರು ಮುಖ್ಯ
ಅತಿಥಿಗಳಾಗಿಭಾಗವಹಿಸಿ ಎಲ್ಲ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದರು. ಪ್ರಶಾಂತ ಕಂಬಾರ ಧ್ಯೇಯ ಗೀತೆ ಹಾಡಿದರು. ರಾಜಶ್ರೀ ಮಾಳಗಿ ನಿರೂಪಿಸಿದರು. ಪ್ರಸಾದ ಅಷ್ಟಗಿಕರ್ ಎಲ್ಲರನ್ನು ಸ್ವಾಗತಿಸಿದರು .ಸೌಖ್ಯ ಪ್ರವೀಣ ವಂದಿಸಿದರು.ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ವಿದ್ವಾನ್ ಅನಂತ ಕೆ. ಚಿಂಚನಸೂರ, ಡಾ. ಶುಭಾಂಗಿ ಹಾಗೂ ಸಂಧ್ಯಾ ಪಿ. ಭಟ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಅವರ ವಿದ್ಯಾರ್ಥಿಗಳು ಹಾಗೂ ಸೌಖ್ಯಾ ಪ್ರವೀಣ್, ವೈಷ್ಣವಿ ಪಾಟೀಲ, ಕಾಳಿಕಾ ಎಚ್. ದುರ್ಗ ಮತ್ತು ಪ್ರಿಯಾ ಹಿಪ್ಪರಗಿ ಅವರ ವಿದ್ಯಾರ್ಥಿನಿಯರು ಅನೇಕ ದಾಸರ ಹಾಡುಗಳನ್ನು ನೃತ್ಯ ರೂಪದಲ್ಲಿ ಪ್ರದರ್ಶಿಸಿದರು. ಕೊನೆಗೆ ಎಲ್ಲ 7 ತಂಡದ ಸೇರಿ 33 ವಿದ್ಯಾರ್ಥಿನಿಯರು ಪ್ರದರ್ಶಿಸಿದ ವಂದೇ ಮಾತರಂ ಹಾಡು ಎಲ್ಲರ ಮನಕೆ ಆನಂದ ನೀಡಿತು
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿ ಅಧ್ಯಕ್ಷರಾದ ಲೀಲಾವತಿ ಕುಲಕರ್ಣಿ, ಸಂಸ್ಕಾರ ಭಾರತಿ ಪ್ರಾಂತ ಸಂಘಟಕ ಶ್ರೀನಿವಾಸ್ ಜಿ ,ಕೋಶಾಧ್ಯಕ್ಷ ಜಯಚಾರ ಭಾಟೆ, ಅನಿತಾ ಸುಬೇದಾರ್, ರಾಮಚಂದ್ರ ಸೂಗುರು , ಪ್ರವೀಣ, ಸರಸ್ವತಿ ಹೆಬ್ಬಾರ, ಮಂಗಳ ರುದ್ರವಾಡಿ, ಡಾ.ಭಾಗ್ಯಲಕ್ಷ್ಮಿ , ಎಲ್ಲ ವಿದ್ಯಾರ್ಥಿನಿಯರ ಪಾಲಕರು, ಕರುಣೇಶ್ವರ್ ಕಾಲೋನಿಯ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಸಂಸ್ಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಡಾ. ಅಂಬುಜಾ ಮಳಖೇಡಕರ ತಿಳಿಸಿದ್ದಾರೆ.


























