
ಕರ್ನಾಟಕ ಏಕೀಕರಣದ ಹೋರಾಟಗಾರರು, ನ್ಯಾಯವಾದಿಗಳು, ಮಾಜಿ ಮುಖ್ಯಮಂತ್ರಿ ದಿ. ಎಸ್. ಆರ್. ಬೊಮ್ಮಾಯಿ ರವರ ಜಯಂತೋತ್ಸವದ ಅಂಗವಾಗಿ ಹುಬ್ಬಳ್ಳಿ ತಾಲೂಕ ಹೆಬಸೂರ ಗ್ರಾಮದಲ್ಲಿರುವ ಅವರ ಪ್ರತಿಮೆಗೆ ಬಿಜೆಪಿ ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿಗಳಾದ ದೇವರಾಜ್ ಬ. ದಾಡಿಬಾವಿ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಅಶೋಕ್ ಮಂಡಿಗನಾಳ, ಎಸ್. ವಿ. ಕೊಣ್ಣೂರ, ಕಲ್ಮೇಶ್ ಉಳ್ಳಾಗಡ್ಡಿ, ಫಕೀರೇಶ ಹಡಪದ, ಬಸವರಾಜ ಹೂಗಾರ, ಸುರೇಶ ಹಡಪದ, ಬಸವರಾಜ ತಳವಾರ, ಬಸವರಾಜ ಕಾಳಿ, ಸಂತೋಷ್ ಕಾಳಿ, ಎಂ. ವೈ ಹುಬ್ಬಳ್ಳಿ, ನಾಗೇಶ್ ಮುದುಗೌಡರ್ ಮತ್ತಿತರರು ಉಪಸ್ಥಿತರಿದ್ದರು.


























