
ಅಫಜಲಪುರ: ವಿಕಲಚೇತನ ಮಕ್ಕಳಿಗೆ ಸೂಕ್ತ ವಾತಾವರಣ, ಪ್ರೀತಿ ಮತ್ತು ಪೆÇ್ರೀತ್ಸಾಹ ದೊರೆತರೆ ಅವರು ಆತ್ಮವಿಶ್ವಾಸದಿಂದ ಜೀವನ ನಡೆಸಲು ಸಾಧ್ಯ. ಹೀಗಾಗಿ ವಿಶೇಷ ಮಕ್ಕಳ ಸಾಮಥ್ರ್ಯವನ್ನು ಗುರುತಿಸಿ, ಅವರ ಬೆಳವಣಿಗೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ದೇವಲ ಗಾಣಗಾಪೂರ ಎಸ್ಬಿಐ ವ್ಯವಸ್ಥಾಪಕ ಪಾರಸ್ ಮಹಾಜನ್ ಹೇಳಿದರು.
ತಾಲೂಕಿನ ದೇವಲ ಗಾಣಗಾಪೂರದಲ್ಲಿರುವ ಶ್ರೀಮತಿ ಗಂಗಾ ಮಾತೋಶ್ರೀ ರಾಷ್ಟ್ರೀಯ ಅಂಗವಿಕಲರ ಸಂಘದ ಶ್ರೀಗುರುದತ್ತ ಸ್ಪೂರ್ತಿ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಆಯೋಜಿಸಿದ್ದ ವಿಕಲಚೇತನರ ಆರೈಕೆದಾರರ ವಿಶ್ವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಚೇತನ ಮಕ್ಕಳನ್ನು ಸಹಾನುಭೂತಿಯಿಂದ ಕಾಣುವುದಷ್ಟೇ ಸಾಲದು, ಅವರಿಗೆ ಗೌರವಯುತ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ಕಲ್ಪಿಸಬೇಕು. ಅವರಲ್ಲಿ ಅಡಗಿರುವ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಹೊರತರುವ ನಿಟ್ಟಿನಲ್ಲಿ ಕುಟುಂಬದವರು, ಶಿಕ್ಷಕರು ಹಾಗೂ ಸಮಾಜ ಒಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಪತ್ರಕರ್ತ ರಾಹುಲ್ ಜೀ ದೊಡ್ಮನಿ ಮಾತನಾಡಿ, ವಿಕಲಚೇತನ ಮಕ್ಕಳಿಗೆ ನಿರಂತರ ಆರೈಕೆ, ಸೂಕ್ತ ತರಬೇತಿ ಹಾಗೂ ಶಿಕ್ಷಣ ದೊರೆತರೆ ಅವರು ಕೂಡ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಉಚಿತ ಶಿಕ್ಷಣದೊಂದಿಗೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಿ ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸುತ್ತಿರುವ ಗಂಗಾ ಮಾತೋಶ್ರೀ ಸಂಸ್ಥೆಯ ಸೇವೆ ಪ್ರಶಂಸನೀಯವಾಗಿದೆ. ಇಂತಹ ಸಂಸ್ಥೆಗಳಿಗೆ ಸಾರ್ವಜನಿಕರು ಹಾಗೂ ದಾನಿಗಳು ನೆರವು ನೀಡಬೇಕು ಎಂದು ಮನವಿ ಮಾಡಿದರು.
ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಪಾಟೀಲ್ ಮಾತನಾಡಿ, ಅನೇಕ ಆರ್ಥಿಕ ಸವಾಲುಗಳ ನಡುವೆಯೂ ವಿಶೇಷ ಮಕ್ಕಳ ಆರೈಕೆ ಮತ್ತು ಶಿಕ್ಷಣಕ್ಕಾಗಿ ಸಂಸ್ಥೆ ಶ್ರಮಿಸುತ್ತಿದೆ. ಮಕ್ಕಳ ಅಗತ್ಯಗಳನ್ನು ಪೂರೈಸಲು ದಾನಿಗಳು ಸಹಕಾರ ನೀಡಬೇಕು ಎಂದು ಕೋರಿದರು.
ವ್ಯಾಪಾರಿ ಯೋಗೇಶ ಸುತಾರ ಮಕ್ಕಳ ಆರೈಕೆಗಾಗಿ ಧನಸಹಾಯ ನೀಡಿದರು. ದೀಪಾವಳಿ ಹಬ್ಬದಂದು ಮಕ್ಕಳಿಗೆ ಸಿಹಿ ಹಂಚುವುದರೊಂದಿಗೆ ಮುಂದೆಯೂ ಸೇವೆ ಸಲ್ಲಿಸುವುದಾಗಿ ತಿಳಿಸಿದರು. ಸಂಸ್ಥೆಯ ವ್ಯವಸ್ಥಾಪಕ ಮಿರ್ಜಾ ಟಿಪ್ಪು ಬೇಗ್, ಸಿಬ್ಬಂದಿಗಳಾದ ಪದ್ಮಾವತಿ ಶ್ರೀಮಣಿ, ಸಾಗರ ಬನ್ಸೋಡೆ, ನೀಲಮ್ಮ ಮೂಲಿಮನಿ, ಶಿವಕುಮಾರ ಹಿರೇಮಠ, ಸೋಮಯ್ಯ ಹಿರೇಮಠ, ಪೂಜಾ ತಳವಾರ, ಮಹಾನಂದಾ ಸಿದ್ದಾರಾಮ, ಮಕ್ಕಳ ಪಾಲಕರು ಇದ್ದರು.























