
*ಬಿಜೆಪಿ ಅಭ್ಯರ್ಥಿ ಐದನೇ ಗೆಲುವಿಗೆ,
*ಕಾಂಗ್ರೆಸ್ ಅಭ್ಯರ್ಥಿ ಎರಡನೇ ಗೆಲುವಿಗೆ ಯತ್ನ
* 13 ಜನ ಕಣದಲ್ಲಿ
* ಬಳ್ಳಾರಿ ಜಿಲ್ಲೆಯಲ್ಲಿ 9 ಬೂತ್, 3393 ಮತದಾರರು
* ಅ.27 ಮತಗಳ ಎಣಿಕೆ ಕಲ್ಬುರ್ಗಿಯಲ್ಲಿ
* ಮತದಾರರಿಗೆ ಹಣದ ಅಮಿಷ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.22: ವಿಧಾನ ಪರಿಷತ್ತಿನ ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ನಾಳೆ ಬೆಳಿಗ್ಗೆ 8 ರಿಂದ ಸಂಜೆ 4 ವರೆಗೆ ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ಪೈಪೋಟಿ ಇದೆ.
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಶಶೀಲ್ ಜಿ. ನಮೋಶಿ ಅವರು ಈ ಕ್ಷೇತ್ರದಿಂದ 1996, 2002, 2008 ಮತ್ತು 2020 ಸೇರಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಈಗ ಐದನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
2014ರಲ್ಲಿ ಕಾಂಗ್ರೆಸ್ನ ಶರಣಪ್ಪ ಮಟ್ಟೂರ ಅವರು ಶಶೀಲ್ ನಮೋಶಿ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು.ಈಗ ಅವರು ಎರಡನೇ ಬಾರಿಗೆ ಆಯ್ಕೆ ಬಯಸಿದ್ದಾರೆ
ಶಶೀಲ್ ಜಿ. ನಮೋಶಿ ಮತ್ತು ಕಮಗ್ರೆಸ್ ನ
ಶರಣಪ್ಪ ಮಟ್ಟೂರ ಅಲ್ಲದೆ ಸಾಯಿಬಣ್ಣ ಜಮಾದಾರ ಆಮ್ ಆದ್ಮಿ ಪಕ್ಷದಿಂದ,ಶಂಕರರೆಡ್ಡಿ ಪಾಟೀಲ ಜನತಾ ದಳ (ಯುನೈಟೆಡ್) ನಿಂದ ಹಾಗು 9 ಜನರು ಪಕ್ಷೇತರರಾಗಿ ಒಟ್ಟಾರೆ 13 ಜನ ಕಣದಲ್ಲಿದ್ದಾರೆ.
ಮತ ಎಣಿಕೆ: ಅಕ್ಟೋಬರ್ 27 ರಂದು ಕಲ್ಬುರ್ಗಿಯಲ್ಲಿ ನಡೆಯಲಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ.
ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ನಗರದಲ್ಲಿ 4, ಕಂಪ್ಲಿ, ಕುರುಗೋಡು, ಸಂಡೂರು, ತೆಕ್ಕಲಕೋಟೆ, ಕರೂರು ಸೇರಿ ಒಟ್ಟು ಒಂಭತ್ತು ಮತಗಟ್ಟೆ ಸ್ಥಾಪಿಸಿದೆ.
1579 ಮಹಿಳಾ ಮತದಾರರು ಸೇರಿ ಒಟ್ಟು 3393 ಮತದಾರರಿದ್ದಾರೆ. ಮತದಾನಕ್ಕಾಗಿ 60 ಜನ ಸಿಬ್ಬಂದಿಯನ್ನು ನೇಮಕ ಮಾಡಿದೆ ಎಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ ತಿಳಿಸಿದ್ದಾರೆ.
ಹಣದ ಅಮಿಷ:
ಈ ವರೆಗೆ ಈ ಚುನಾವಣೆಯಲ್ಲಿ ಮತದಾನಕ್ಕೆ ಕರೆತಂದು, ಪ್ರಚಾರಕ್ಕೆ, ಹಣ ನೀಡುವ ಪರಿಪಾಟ ಇತ್ತು. ಆದರೆ ಈ ಬಾರಿ ಮೊದಲ ಬಾರಿಗೆ ಎರೆಡು ರಾಷ್ಟ್ರೀಯ ಪಕ್ಷಗಳು ಮತದಾರರಿಗೆ ನೇರವಾಗಿ ಹಣದ ಅಮಿಷ ಒಡ್ಡಿದ್ದಾರೆ. ಕೈ ನಿಂದ ಒಂದು ಸಾವಿರ, ಹೂವಿನಿಂದ 3 ಸಾವಿರ ಹಂಚಲಾಗಿದೆಯಂತೆ.























