
ಸಂಜೆವಾಣಿ ವಾರ್ತೆ
ಹೊಸಪೇಟೆ.ಅ.22 ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಶ್ರೀ ಜಗದ್ಗುರು ಮಧ್ವಾಚಾರ್ಯರ ಜಯಂತಿಯನ್ನು ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರು ಶ್ರೀಮಧ್ವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್, ರಾಜ್ಯಾದ್ಯಂತ ಈ ದಿನ ಬ್ರಾಹ್ಮಣ ಸಮಾಜದ ವತಿಯಿಂದ ಮದ್ವ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಧ್ವಾಚಾರ್ಯರು ಸಹ ಆಚಾರ್ಯ ತ್ರಯರಲ್ಲಿ ಒಬ್ಬರಾದವರು. ಮನುಷ್ಯನು ಇಹಲೋಕದಲ್ಲಿ ಎಲ್ಲಾ ಸುಖ ಸೌಭಾಗ್ಯಗಳನ್ನು ಅನುಭವಿಸಿದ ಮೇಲೆ ವಿರಕ್ತನಾಗಿ ಭಕ್ತಿಯಿಂದ ಪರಮಾತ್ಮನನ್ನು ಆರಾಧಿಸಿ ಅವನನ್ನು ಸೇರುವ ಮಾರ್ಗವನ್ನು ತಿಳಿಸಿಕೊಟ್ಟವರು. ಜ್ಞಾನ, ಭಕ್ತಿಗಳಿಂದ ಮೋಕ್ಷ ಸಾಧನಿಗೆ ಮನುಷ್ಯನು ಹಂತ ಹಂತವಾಗಿ ಸಾಧನೆಯನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಷ್ಣು ಸಹಸ್ರನಾಮ ಮಂಡಳಿ ಕಾರ್ಯಧ್ಯಕ್ಷ ಶ್ರೀನಿವಾಸ್ ತಂತ್ರಿ, ಬ್ರಾಹ್ಮಣ ಸಮಾಜದ ಖಜಾಂಚಿ ರಮೇಶ್ ಪುರೋಹಿತ್, ಮುಖಂಡರಾದ ವೆಂಕಟೇಶ್ ಮೂರ್ತಿ, ನರಸಿಂಹಮೂರ್ತಿ, ಕಲ್ಲಂ ಭಟ್, ಸೀನಂ ಭಟ್, ಗುರುರಾಜ್ ದಿಗ್ಗಾವಿ, ಪ್ರಭಾಕರ್ ರಾವ್, ನರಸಿಂಹ ಆಚಾರ್ಯ, ಚಂದ್ರಕಾಂತ್ ಕಾಮತ್, ಹೆಚ್. ಉಮೇಶ್, ಗಲಗಲಿ ಆಚಾರ್ಯ ಸೇರಿದಂತೆ ಮತ್ತಿತರರು ಇದ್ದರು.























