
ಕಲಬುರಗಿ,ನ.6: ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಪರಂಪರೆಯ ಯಾತ್ರಾ ಕ್ಷೇತ್ರವಾದ ಕಮಲಾಪೂರ ತಾಲ್ಲೂಕಿನ ರಟಗಲ್ಲ (ರೇವಗ್ಗಿ) ಶ್ರೀ ರೇವಣಸಿದ್ದೇಶ್ವರ ದೇವಾಲಯ ಅತ್ಯಂತ ಪ್ರಾಚೀನ ಇತಿಹಾಸಹೊಂದಿರುವ ಪವಿತ್ರ ತಾಣವಾಗಿದೆ.ಇಲ್ಲಿಗೆ ಆಗಮಿಸುವ ಭಕ್ತರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೇಇರುವುದರಿಂದ ಭಕ್ತರಿಗೆ ತೀವ್ರವಾದ ತೊಂದರೆ ಆಗುತ್ತಿz.É ಇದರಿಂದ ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ರೇವಣಸಿದ್ದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ರಾಜ್ಯದ ಮುಜರಾಯಿ ಮತ್ತು ಮೀನುಗಾರಿಕೆ ಬಂದರು ಹಾಗೂಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಕೆ.ಎಸ್. ಬಸವಂತಪ್ಪ ಅವರಿಗೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಬೆಂಗಳೂರಿನಲ್ಲಿ ಮನವಿ ಪತ್ರ ಸಲ್ಲಿಸಲಾಯಿತು
ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿರುವ ಈ ದೇವಾಲಯವು ಎ-ಗ್ರೇಡ್ ದೇವಾಸ್ಥಾನವಾಗಿದ್ದು ಪ್ರತಿವರ್ಷ ಲಕ್ಷಾಂತರ ರೂಪಾಯಿ ಆದಾಯ ಹೊಂದಿದ್ದರು ಸಹ ಶುದ್ಧವಾದ ಕುಡಿಯುವ ನೀರು ಉತ್ತಮ ಕೋಣೆಗಳು ಸ್ನಾಗೃಹಗಳುಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳು ಇಲ್ಲದೇ ಇರುವುದು ಅತ್ಯಂತ ಬೇಸರದ ವಿಷಯವಾಗಿದೆ ಎಂದು ಮಹಾಸಭಾದ ಕಾರ್ಯದರ್ಶಿ ನಾಗಲಿಂಗಯ್ಯ ಮಠಪತಿ ಸಚಿವರ ಗಮನಕ್ಕೆ ತಂದರು.ರೇವಣಸಿದ್ದೇಶ್ವರ ದೇವಾಲಯದ ಪರಿಸರ ಅತ್ಯಂತ ಸುಂದರ ಮತ್ತು ಸೃಷ್ಟಿಯ ಸೊಬಗಿನಿಂದ ಕೂಡಿದ್ದು ದೇವಾಲಯಸೇರಿದಂತೆ ಬೆಟ್ಟದ ಪರಿಸರ ಸಮಗ್ರವಾಗಿ ಅಭಿವೃದ್ಧಿಗೊಳಿಸಿದರೆ ಧಾರ್ಮಿಕ ಯಾತ್ರೆಯ ಜೊತೆಗೆ ಒಂದು ಸುಂದರ ಪ್ರವಾಸಿ ತಾಣವನ್ನಾಗಿಸಹ ರೂಪಿಸಬಹುದು ಎಂದು ಸಚಿವರಿಗೆ ಮಠಪತಿ ವಿವರಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವರು ದೇವಾಲಯದ ಸವಾರ್ಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಿರಿಯ ಇಲಾಖೆಯ ಅಧಿಕಾರಿಗಳ ಸಭೆ ಕರೆದುಚರ್ಚಿಸಲಾಗುವುದು ಪ್ರಾಧಿಕಾರ ರಚಿಸುವ ಸಂಬಂಧ ಚಿಂತಿಸಲಾಗುವುದು ಎಂದು ಹೇಳಿದರು





















