
ಬೆಂಗಳೂರು, ಸೆ. ೩- ಮಂಗಳೂರಿನ ಕೆ ಆರ್ ಐ ಡಿ ಎಲ್ ಇಂಜಿನಿಯರ್ ಗಳು ಲಂಚ ಕೇಳಿರುವ ಪ್ರಕರಣದ ಬಗ್ಗೆ ತನಿಖೆಗೆ ಮನವಿ ಮಾಡಿದ್ದೇನೆ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದರು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕ ಮಿತ್ರರಿಗೆ ಅವರ ಸ್ನೇಹಿತರು ಬಂದು ಅಧಿಕಾರಿಗಳು ಉಸ್ತುವಾರಿ ಸಚಿವರು ಹಾಗೂ ಸಚಿವರ ಹೆಸರನ್ನಹೇಳಿ ಹಣ ಕೇಳುತ್ತಿದ್ದಾರೆ ಹೀಗೆ ಮಾಹಿತಿ ಕೊಟ್ಟಾಗ
ನನ್ನ ಹಾಗೂ ಗ್ರಾಮೀಣ ಸಚಿವರ ಹೆಸರನ್ನ ಕೆಡಿಸಬಾರದೆಂದು ನಮ್ಮ ಬಗ್ಗೆ ಕಾಳಜಿ ವಹಿಸಿ ಶಾಸಕರು ತಕ್ಷಣ ಪತ್ರ ಬರೆದಿದ್ದಾರೆ
ಹೀಗಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮಾತಾಡಿದ್ದೇನೆ.ತನಿಖೆ ಆಗಬೇಕು ಎಂದಿದ್ದೇನೆ. ತನಿಖೆ ಮಾಡೋದಾಗಿ ಅವರು ಹೇಳಿದ್ದಾರೆ
ಸಿಎಂಗೂ ನಾನು ಮನವಿ ಮಾಡಿಕೊಟ್ಟಿದ್ದೇನೆ. ಸತ್ಯಾಸತ್ಯತೆ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದರು .
ಇಂಜಿನಿಯರ್ ತಪ್ಪಿದೆಯಾ ಶಾಸಕರ ಅನುಯಾಯಿಗಳು ಹೇಳಿದ್ದು ಸತ್ಯ ,ಸುಳ್ಳಾ ಗೊತ್ತಾಗಬೇಕು. ನಮ್ಮ ಇಂಜಿನಿಯರಿಂಗ್‌ಗಳಿಂದ ಈರೀತಿ ಯಾರೂ ಮಾಡಿಲ್ಲ. ಯಾವುದೇ ಪಕ್ಷ ಇರಲಿ, ಕರಾವಳಿಭಾಗದಲ್ಲಿ ಹೀಗಿಲ್ಲ
ಹೀಗಾಗಿ ನಾನು ಯಾವುದೇ ಹೆಚ್ಚಿನ ಸ್ಪಷ್ಟನೆ ಕೊಡಲ್ಲ ಎಂದರು.































