
ಕಲಬುರಗಿ : ಮೇ.25:ರಾಸ್ ಬಿಹಾರಿ ಬೋಸ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕ್ರಾಂತಿಕಾರಿ. ಲಾರ್ಡ್ ಹಾಡಿರ್ಂಗ್ ಮೇಲಿನ ದಾಳಿಯ ಸಂಚು, ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ಸ್ಥಾಪನೆ ಮತ್ತು ‘ಆಜಾದ್ ಹಿಂದ್ ಫೌಜ್’ಅನ್ನು ರಚಿಸಿ,ಅದರ ನೇತೃತ್ವವನ್ನು ಅವರು ಸುಭಾಷ್ ಚಂದ್ರ ಬೋಸ್ ಅವರಿಗೆ ಹಸ್ತಾಂತರಿಸಿದರು ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಿದ್ದ “ರಾಸ್ ಬಿಹಾರಿ ಬೋಸ್ ಅವರ 140ನೇ ಜನ್ಮದಿನಾಚರಣೆ”ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಬ್ರಿಟಿಷ್ ವೈಸ್ರಾಯ್ ಲಾರ್ಡ್ ಹಾಡಿರ್ಂಗ್ ಮೇಲೆ ಬಾಂಬ್ ಎಸೆಯುವ ಯೋಜನೆಯನ್ನು ರೂಪಿಸಿದವರು ರಾಸ್ ಬಿಹಾರಿ ಬೋಸ್. ಈ ದಾಳಿಯ ನಂತರ ಬ್ರಿಟಿಷ್ ಪೆÇೀಲೀಸರಿಗೆ ಸಿಗದೆ ಅವರು ಜಪಾನ್ಗೆ ಪಲಾಯನ ಮಾಡಿದರು. ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಜಪಾನ್ನಲ್ಲಿ ನೆಲೆಸಿದ ನಂತರ, ಅವರು 1942ರಲ್ಲಿ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ವಿದೇಶದಲ್ಲಿ ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಜಪಾನ್ನ ಬೆಂಬಲವನ್ನು ಗಳಿಸಲು ಇದು ಪ್ರಮುಖ ವೇದಿಕೆಯಾಯಿತು. ಆಜಾದ್ ಹಿಂದ್ ಫೌಜ್ ಆಜಾದ್ ಹಿಂದ್ ಫೌಜ್ನ ಮೂಲ ಸಂಸ್ಥಾಪಕರು ರಾಸ್ ಬಿಹಾರಿ ಬೋಸ್. ಜಪಾನ್ನಲ್ಲಿದ್ದ ಭಾರತೀಯ ಯುದ್ಧ ಕೈದಿಗಳನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಅವರು ಈ ಸೈನ್ಯವನ್ನು ಕಟ್ಟಿದರು. ಸುಭಾಷ್ ಚಂದ್ರ ಬೋಸ್ಗೆ ಅಧಿಕಾರ ಹಸ್ತಾಂತರ ಮಾಡಿದರು. ಐಎನ್ ಎ ನಾಯಕತ್ವವನ್ನು ಮುನ್ನಡೆಸಲು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು 1943ರಲ್ಲಿ ಸಿಂಗಾಪುರಕ್ಕೆ ಆಹ್ವಾನಿಸಿ, ಆ ಸೈನ್ಯದ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ಬಿಟ್ಟುಕೊಟ್ಟರು.
ಈ ಮಹಾನ್ ನಾಯಕನ ದೇಶ ಸೇವೆಯನ್ನು ಗುರುತಿಸಿ ಜಪಾನ್ ಸರ್ಕಾರವು ಅವರನ್ನು ‘ಆರ್ಡರ್ ಆಫ್ ದಿ ರೈಸಿಂಗ್ ಸನ್’ ಎಂಬ ಅತ್ಯುನ್ನತ ಗೌರವದಿಂದ ಸತ್ಕರಿಸಿತು. ಕಾರ್ಯಕ್ರಮದಲ್ಲಿ ಡಾ.ರಾಜಶೇಖರ ಪಾಟೀಲ್, ಶಿವಯೋಗೆಪ್ಪಾ ಎಸ್. ಬಿರಾದಾರ, ದತ್ತು ಹಡಪದ, ದಿನೇಶ ಮಿಶ್ರಾ ಹಾಗೂ ವಿದ್ಯಾರ್ಥಿಗಳು ಇದ್ದರು.






















