Home ಜಿಲ್ಲೆ ಅರಕೇರಿಯಲ್ಲಿ ವಿಬಿಜಿರಾಮಜಿ ಯೋಜನೆ ಜನಜಾಗೃತಿ ದಿನಗೂಲಿ 382ಕ್ಕೆ ಏರಿಕೆ, 125 ದಿನ ಉದ್ಯೋಗ ಖಾತ್ರಿ –...

ಅರಕೇರಿಯಲ್ಲಿ ವಿಬಿಜಿರಾಮಜಿ ಯೋಜನೆ ಜನಜಾಗೃತಿ ದಿನಗೂಲಿ 382ಕ್ಕೆ ಏರಿಕೆ, 125 ದಿನ ಉದ್ಯೋಗ ಖಾತ್ರಿ – ಗ್ರಾಮೀಣ ಕೂಲಿಕಾರರಿಗೆ ಹೊಸ ಭರವಸೆ

ವಿಜಯಪುರ, ಜು.21: ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಗ್ರಾಮ ಪಂಚಾಯತಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ “ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಷನ್ ಗ್ರಾಮೀಣ (ಗಿಃಉಖಂಒಉ)” ಯೋಜನೆ ಕುರಿತು ಬೃಹತ್ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿ.ಎಸ್. ನಾಯಿಕ ಮಾತನಾಡಿ, ಗ್ರಾಮೀಣ ಕೂಲಿಕಾರರ ಕಲ್ಯಾಣಕ್ಕಾಗಿ ಹೊಸ ಯೋಜನೆಯಡಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ದಿನಗೂಲಿಯನ್ನು ?370ರಿಂದ ?382ಕ್ಕೆ ಹೆಚ್ಚಿಸಲಾಗಿದ್ದು, ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತದೆ. ಉದ್ಯೋಗ ಖಾತರಿಯ ಅವಧಿಯನ್ನು 100 ದಿನಗಳಿಂದ 125 ದಿನಗಳಿಗೆ ವಿಸ್ತರಿಸಲಾಗಿದೆ. ಕೂಲಿ ಮೊತ್ತವನ್ನು 15 ದಿನಗಳೊಳಗೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು, ವಿಳಂಬವಾದರೆ ಪರಿಹಾರ ನೀಡುವ ವ್ಯವಸ್ಥೆಯೂ ಇದೆ ಎಂದು ಹೇಳಿದರು.
ಯೋಜನೆಯಡಿ ಉದ್ಯೋಗ ಸೃಷ್ಟಿಯ ಜೊತೆಗೆ ಕೆರೆ, ಕಾಲುವೆ, ರಸ್ತೆ, ಶಾಲಾ ಆವರಣ ಗೋಡೆ ಸೇರಿದಂತೆ ಗ್ರಾಮೀಣ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಯಾವುದೇ ಗ್ರಾಮೀಣ ಕೂಲಿಕಾರರು ಉದ್ಯೋಗದಿಂದ ವಂಚಿತರಾಗದಂತೆ ಸರ್ಕಾರ ಕ್ರಮ ಕೈಗೊಂಡಿದ್ದು, ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನೂ ನೀಡಲಾಗಿದೆ ಎಂದು ತಿಳಿಸಿದರು.

ಮನರೇಗಾ ಕಾಮಗಾರಿ ಮುಂದುವರಿಕೆ:

ಜೂನ್ 30ರವರೆಗೆ ಮನರೇಗಾ ಯೋಜನೆಯಡಿ ಆರಂಭಗೊಂಡಿರುವ ಕಾಮಗಾರಿಗಳನ್ನು ಹೊಸ ಯೋಜನೆಯ ನಿಯಮಗಳ ಅನ್ವಯ ಯಾವುದೇ ಅಡಚಣೆ ಇಲ್ಲದೆ ಮುಂದುವರಿಸಲು ಅವಕಾಶವಿದ್ದು, ಕೂಲಿಕಾರರ ಉದ್ಯೋಗಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇ-ಕೆವೈಸಿ ಕಡ್ಡಾಯ:

ನೋಂದಾಯಿತ ಎಲ್ಲ ಕೂಲಿಕಾರರು ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕು. ಹೊಸದಾಗಿ ಉದ್ಯೋಗ ಚೀಟಿ ಪಡೆಯಲು ಅರ್ಹರಾಗಿರುವವರು ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಗ್ರಾಮಸ್ಥರು ಉದ್ಯೋಗಕ್ಕಾಗಿ ವಲಸೆ ಹೋಗದೆ ತಮ್ಮ ಗ್ರಾಮದಲ್ಲಿಯೇ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ, ಹೊಸ ಜಾಬ್ ಕಾರ್ಡ್ ಬರುವವರೆಗೆ ಈಗಾಗಲೇ ಮನರೇಗಾ ಯೋಜನೆಯಡಿ ನೀಡಿರುವ ಹಳೆಯ ಜಾಬ್ ಕಾರ್ಡ್‍ಗಳೇ ಮಾನ್ಯವಾಗಿರುತ್ತವೆ. ಇ-ಕೆವೈಸಿ ಪೂರ್ಣಗೊಳಿಸದವರಿಗೆ ಯೋಜನೆಯ ಪ್ರಯೋಜನ ದೊರೆಯುವುದಿಲ್ಲವಾದ್ದರಿಂದ ಎಲ್ಲರೂ ಶೀಘ್ರವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಬಿ.ಎಫ್.ಟಿ. ಸಂತೋಷ ಗೊಜ್ಜಿ, ಗ್ರಾಮ ಪಂಚಾಯತಿ ಸದಸ್ಯರು, ಸ್ವಸಹಾಯ ಸಂಘಗಳ ಮಹಿಳೆಯರು ಹಾಗೂ ನೂರಾರು ಕೂಲಿಕಾರರು ಭಾಗವಹಿಸಿದ್ದರು.