Home ಜಿಲ್ಲೆ ಪ್ರತಿಭಟನಾ ಮೆರವಣಿಗೆ

ಪ್ರತಿಭಟನಾ ಮೆರವಣಿಗೆ


ಕುಂದಗೋಳ ಜೂ.೧೫ : ಸಂತೋಷ ಲಾಡ್ ಹಾಗೂ ಸಲಿಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕುಂದಗೋಳ ಗಾಳಿ ಮರೆಮ್ಮ ದೇಗುಲದಿಂದ ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.


ಮನವಿ ಸ್ವೀಕರಿಸಿದ ರಾಜ್ಯ ಕೆಪಿಸಿಸಿ ಸದಸ್ಯ ಅರವಿಂದ ಕಟಗಿ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ, ಪ.ಪಂ. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಿರೇಸೂರ ಗ್ಯಾರಂಟಿ ಸಮಿತಿ ಅಧ್ಯಕ್ಷ ನೆಹರು ಪಾಟೀಲ, ಮುಖಂಡರಾದ ಶಿವಾನಂದ ಮುತ್ತಣ್ಣವರ, ಸಲೀಂ ಕ್ಯಾಲಕೂಂಡ, ಯಲ್ಲಪ್ಪಗೌಡ ಪಾಟೀಲ, ಸಿದ್ದಲಿಂಗಪ್ಪ ಕರೆಮ್ಮನವರ, ಖಯಿಂ ನಾಲಬಂದ, ರಾಯೇಸಾಬ ಕಳ್ಳಿಮನಿ, ಬಸವರಾಜ ಶಿರಸಂಗಿ, ಬಾಬಾಜಾನ್ ಮಿಶ್ರಿಕೋಟಿ, ಕಾಂತೇಶ ದೊಡ್ಡಮನಿ, ಶಂಭಯ್ಯ ನಿರಲಗಿ, ರಾಜು ದೊಡ್ಡಶಂಕರ, ಅಬ್ದುಲ್ ಖಾದರ ಜಿಲಾನಿ, ಅಡಿವೇಪ್ಪ ಹೆಬಸೂರ, ಕಾಂತು ದೊಡಮನಿ ಹಾಗೂ ಇತರರಿದ್ದರು.