
ಲಕ್ಷ್ಮೇಶ್ವರ, ಮೇ22: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಗಡ್ಡದೇವರಮಠ ನಗರದ ನಿವಾಸಿಗರು ಕುಡಿಯುವ ನೀರನ್ನು ಒದಗಿಸುವಂತೆ ಒತ್ತಾಯಿಸಿ ದಿಡೀರ ಪ್ರತಿಭಟನೆ ನಡೆಸಿದರು.
ನಿವಾಸಿಗರು ಕುಡಿಯುವ ನೀರಿಗಾಗಿ ಗಲ್ಲಿ ಗಲ್ಲಿ ಅಡ್ಡಾಡುವ ಸ್ಥಿತಿ ನಿರ್ಮಾಣವಾಗಿದೆ ನಲ್ಲಿಗಳಿದ್ದರೂ ನೀರಿಲ್ಲದ ಸ್ಥಿತಿ ಇದೆ ಎಷ್ಟೊಂದು ದಿವಸ ಹೀಗೆಯೇ ಅನುಭವಿಸುವುದು, ಗಡ್ಡದೇವರಮಠ ನಗರವನ್ನು ಸಂಪೂರ್ಣ ನಿರ್ಲಕ್ಷ ಮಾಡಿದ್ದು ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿರುಪಾಕ್ಷಪ್ಪ ಹಡಪದ ಮಂಜುನಾಥ್ ಬಳಗಾನೂರ ಭಾಷಾ ಸಾಬ್ ಬೂದಿಹಾಳ ಕಿರಣ್ ಬಳಗಾನೂರ ಎಚ್‍ಎ ಬಹದ್ದೂರ ವೈ ಎಂ ನಾಲಬಂದ ಚನ್ನವ್ವ ಕಮತದ ಸಾಹೇರಾಗುಡಿಗೇರಿ ನಿರ್ಮಲ ಹೊಸಮನಿ ಮಲ್ಲವ್ವ ಗಡದವರ ಸೇರಿದಂತೆ ಅನೇಕರಿದ್ದರು.


























